ಗೋ ಆಶ್ರಯತಾಣಗಳ ಪ್ರಾಧಿಕಾರ ರಚಿಸಿದ ಉತ್ತರ ಪ್ರದೇಶ ಸರಕಾರ

Update: 2019-05-29 16:53 GMT

ಲಕ್ನೋ, ಮೇ.29: ಉತ್ತರ ಪ್ರದೇಶದ ಗೋವಂಶ ಆಶ್ರಯ ಸ್ಥಳಗಳು ಅಥವಾ ಗೋ ಆಶ್ರಯತಾಣಗಳನ್ನು ಜಿಲ್ಲಾಮಟ್ಟದಲ್ಲಿ ನಡೆಸಲು ಮತ್ತು ನಿಭಾಯಿಸಲು ಉತ್ತರ ಪ್ರದೇಶ ಗೋ ಸಂರಕ್ಷಣಾ ಮತ್ತು ಅಭಿವೃದ್ಧಿ ನಿಧಿ ಕಾಯ್ದೆಗಳು, 2019ರ ರಚನೆಗೆ ರಾಜ್ಯ ಸರಕಾರದ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಈ ಪ್ರಾಧಿಕಾರ, ಗೋಸಂರಕ್ಷಣೆಗೆ ಸಂಬಂಧಿತ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲೂ ನೆರವಾಗಲಿದೆ ಎಂದು ಸರಕಾರ ಹೊರಡಿಸಿದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮದ್ಯ ಮಾರಾಟದಿಂದ ಸಂಗ್ರಹವಾಗುವ ಆದಾಯದ ಶೇ.0.5, ಮಂಡಿ ತೆರಿಗೆಯ ಶೇ.2, ಉತ್ತರ ಪ್ರದೇಶ ಸರಕಾರ ನಿರ್ಮಿಸಿರುವ ಎಕ್ಸ್‌ಪ್ರೆಸ್‌ವೇಗಳಿಂದ ಸಂಗ್ರಹವಾಗುವ ಟೋಲ್‌ಗಳ ಶೇ.0.5 ಸೇರಿದಂತೆ ವಿವಿಧ ಮೂಲಗಳಿಂದ ನಿಧಿಯನ್ನು ಸಂಗ್ರಹಿಸಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಪ್ರಾಧಿಕಾರಕ್ಕೆ ನೀಡಲಾಗುವ ನಿಧಿಯ ಮೊತ್ತದ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ. ಉತ್ತರ ಪ್ರದೇಶ ಸರಕಾರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಗೋಆಶ್ರಯತಾಣಗಳ ನಿರ್ಮಾಣ ಮತ್ತು ನಿರ್ವಹಣೆಗೆ 447 ಕೋಟಿ ರೂ. ಮೀಸಲಿಟ್ಟಿದೆ. ಜನವರಿ ಒಂದರಂದು, ಬೀಡಾಡಿ ದನಗಳಿಗೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ತಾತ್ಕಾಲಿಕ ಗೋಆಶ್ರಯತಾಣಗಳನ್ನು ನಿರ್ಮಿಸುವ ಮತ್ತು ಇವುಗಳ ನಿರ್ವಹಣೆಗೆ ಗೋ ಕಲ್ಯಾಣ ತೆರಿಗೆ ವಿಧಿಸುವ ಯೋಜನೆಗೆ ರಾಜ್ಯ ಸಂಪುಟ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News