×
Ad

ಪ್ರಯಾಲ್ ತಾದ್ವಿ ಆತ್ಮಹತ್ಯೆ ಪ್ರಕರಣ: ಆರೋಪಿ ವೈದ್ಯರಿಗೆ ಮೇ 31ರವರೆಗೆ ಕಸ್ಟಡಿ

Update: 2019-05-29 22:35 IST

ಹೊಸದಿಲ್ಲಿ, ಮೇ 29: ಡಾ. ಪ್ರಯಾಲ್ ತಾದ್ವಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿರುವ ಮೂವರು ವೈದ್ಯರಿಗೆ ಮೇ 31ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯ ದ್ವಿತೀಯ ವರ್ಷದ ಮೆಡಿಕಲ್ ವಿದ್ಯಾರ್ಥಿನಿ ಡಾ ಪ್ರಯಾಲ್ ತಾದ್ವಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಸ್ಪತ್ರೆಯ ಹಿರಿಯ ವೈದ್ಯರ ಕಿರುಕುಳ ಮತ್ತು ಜಾತಿ ನಿಂದನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರು ವೈದ್ಯರಾದ ಡಾ ಹೇಮಾ ಅಹುಜಾ, ಡಾ ಅಂಕಿತಾ ಖಂಡೇಲ್‌ವಾಲ್ ಮತ್ತು ಡಾ ಭಕ್ತಿ ಮೆಹರೆ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿತ್ತು.

ಆರೋಪಿಗಳನ್ನು ಬುಧವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಅವರನ್ನು ಮೇ 31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ. ತಮ್ಮ ಮೇಲಿರುವ ಆರೋಪವನ್ನು ನಿರಾಕರಿಸಿರುವ ಆರೋಪಿಗಳು, ಕೆಲಸದ ಹೊರೆಯನ್ನು ರ್ಯಾಗಿಂಗ್ ಎನ್ನುವುದಾದರೆ ತಾವೆಲ್ಲರೂ ರ್ಯಾಗಿಂಗ್‌ಗೆ ಒಳಗಾದವರೇ ಆಗಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News