ಜೂ.20ರಂದು ಕಿಯಾ ಮಿಡ್-ಎಸ್‌ಯುವಿ ಬಿಡುಗಡೆ

Update: 2019-05-29 17:12 GMT

ಮಂಗಳೂರು, ಮೇ 29: ವಿಶ್ವದ 8ನೆ ಅತ್ಯಂತ ದೊಡ್ಡ ವಾಹನ ಉತ್ಪಾದಕ ಸಂಸ್ಥೆಯಾದ ಕಿಯಾ ಮೊಟಾರ್ಸ್‌ನ ಬಹು ನೀರೀಕ್ಷೆಯ ಮಿಡ್ ಎಸ್‌ಯುವಿ ಕಾರು ಜೂನ್ 20ರಂದು ಬಿಡುಗಡೆಗೊಳ್ಳಲಿದೆ ಎಂದು ಸಂಸ್ಥೆಯ ಭಾರತೀಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಎಸ್‌ಒ ಯಾಂಗ್ ಎಸ್. ಕಿಮ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಈ ಮಾಹಿತಿ ನೀಡಿದ ಅವರು, ವಿಶ್ವ ಮಾರುಕಟ್ಟೆಗೆ ಪರಿಚಯವಾಗಲಿರುವ ಈ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸದಿಲ್ಲಿಯಲ್ಲಿ ಈ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.

ಭಾರತದಲ್ಲಿ ಮೊದಲ ಉತ್ಪನ್ನ ಬಿಡುಗಡೆಯ ನಂತರ ಪ್ರತಿ ಆರು ತಿಂಗಳಿಗೆ ಹೊಸ ಕಾರು ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ನೂತನ ವಾಗಿ ಬಿಡುಗಡೆಯಾಗಲಿರುವ ವಿನೂತನ ಕಾರು ಆಂಧ್ರಪ್ರದೇಶದ ಅನಂತಪುರದಲ್ಲಿರುವ ಸಂಸ್ಥೆಯ ಅತ್ಯಾಧುನಿಕ ಘಟಕದಲ್ಲಿ ಉತ್ಪಾನೆಯಾಗಲಿದೆ ಎಂದವರು ಹೇಳಿದರು.

ನೂತನ ಕಾರು ಹೈ ಟೆಕ್ ಫೀಚರ್‌ಗಳಿಂದ ಕೂಡಿದ್ದು, 10.25 ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಸೌಂಡ್ ಮೂಡ್ ಲೈಟಿಂಗ್ ವಿಶೇಷತೆಗಳಿಂದ ಕೂಡಿರುತ್ತದೆ. ಈ ವರ್ಷದ ಜನವರಿಯಿಂದ ನೂತನ ಮಿಡ್ ಎಸ್‌ಯುವಿಯ ಪ್ರಾಯೋಗಿಕ ಉತ್ಪಾದನೆಯನ್ನು ಆರಂಭಿಸಲಾಗಿದೆ.

ಅನಂತಪುರದ 536 ಎಕರೆ ಪ್ರದೇಶಲ್ಲಿ ಕಿಯಾ ಘಟಕವನ್ನು ಹೊಂದಿದ್ದು, ವರ್ಷಕ್ಕೆ 3 ಲಕ್ಷಕ್ಕೂ ಹೆಚ್ಚು ವಾಹನಗಳ ಉತ್ಪಾದನಾ ಸಾಮರ್ಥ್ಯ ಹೊಂದಿದೆ. 10000 ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಈ ಪ್ರದೇಶದಲ್ಲಿ ಸೃಷ್ಟಿಸಲಾಗಿದೆ. ಘಟಕವು ಹೈಬ್ರೀಡ್ ಮತ್ತು ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ರೊಬೊಟಿಕ್ಸ್ ಅಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಘಟಕವು ಹೊಂದಿದ್ದು, ಪರಿಸರ ಸ್ನೇಹಿ ಸೌಲಭ್ಯಗಳನ್ನು ಅಳವಡಿಸಿೊಂಡಿದೆ ಎಂದು ಅವರು ವಿವರಿಸಿದರು.

ವಿನ್ಯಾಸದಲ್ಲಿ ಕಿಯಾ ಬ್ರಾಂಡ್ ಮುಂಚೂಣಿಯಲ್ಲಿದ್ದು, ರೆಡ್ ಡಾಟ್ ಡಿಸೈನ್ ಪ್ರಶಸ್ತಿಯನ್ನು ಕಿಯಾ ಸೀಡ್ ರೇಂಜ್ ಪಡೆದುಕೊಂಡಿದೆ. ಕಿಯಾ ಸಂಸ್ಥೆಯು ಜಾಗತಿಕವಾಗಿ ಕ್ರೀಡೆಗೆ ಉತ್ತೇಜನವನ್ನು ನೀಡುತ್ತಿದ್ದು, ಪಿಫಾ ವರ್ಲ್ಡ್ ಕಪ್ ಮತ್ತು ಆಸ್ಟ್ರೇಲಿಯನ್ ಓಪನ್‌ನಂತಹ ಜಾಗತಿಕ ಕ್ರೀಡೆಗಳ ಪಾಲುದಾರಿಕೆಯನ್ನು ಪಡೆದಿದೆ ಎಂದು ಗೋಷ್ಠಿಯಲ್ಲಿ ಉಪಸ್ಥಿತಿರಿದ್ದ ಕಿಯಾ ಮೋಟಾರ್ಸ್ ಇಂಡಿಯಾದ ಹೆಡ್ ಆಫ್ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್‌ನ ಮನೋಹರ್ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News