ಮೋದಿ ಪ್ರಮಾಣ ವಚನ: ಉಚಿತ ಹಾಲು ಪಾಯಸ ವಿತರಣೆ
Update: 2019-05-30 18:12 IST
ಉಡುಪಿ, ಮೇ 30: ನರೇಂದ್ರ ಮೋದಿ ಎರಡನೆ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಪ್ರಯುಕ್ತ ಕಡಿ ಯಾಳಿ ಶ್ರೀನಿವಾಸ ಹೋಟೆಲ್ ವತಿಯಿಂದ ಇಂದು ಸಾರ್ವಜನಿಕರಿಗೆ ಉಚಿತ ಹಾಲು ಪಾಯಸ ಸೇವಾ ರೂಪವಾಗಿ ವಿತರಿಸಲಾಯಿತು.
ಬಿಜೆಪಿ ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಗಿರೀಶ ಅಂಚನ್, ಗೀತಾ ಶೇಠ್ ಉಚಿತ ಹಾಲು ಪಾಯಸ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಹೋಟೆಲ್ ಮಾಲಕ ನರಸಿಂಹ ಕಿಣಿ, ರಾಘವೇಂದ್ರ ಕಿಣಿ, ದಾವೂದ್ ಅಬೂಬಕ್ಕರ್ ಹಾಜರಿದ್ದರು.
ಮಣಿಪಾಲ- ಉಡುಪಿ ರಸ್ತೆಯಲ್ಲಿ ಸಾಗುವ ರಿಕ್ಷಾ, ಬಸ್‌ಗಳ ಪ್ರಯಾಣಿಕ ರಿಗೆ ಮತ್ತು ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಹಾಲು ಪಾಯಸ ವನ್ನು ವಿತರಿಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು 3 ಸಾವಿರ ಮಂದಿಗೆ ಹಾಲು ಪಾಯಸ ವಿತರಿಸಲಾಯಿತು ಎಂದು ರಾಘವೇಂದ್ರ ಕಿಣಿ ತಿಳಿಸಿದ್ದಾರೆ.