×
Ad

ಕಂದಕ್ ಮುಸ್ಲಿಂ ಜಮಾಅತ್‌ನಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ

Update: 2019-05-30 19:59 IST

ಮಂಗಳೂರು, ಮೇ 30: ಕಂದಕ್ ಮುಸ್ಲಿಂ ಜಮಾಅತ್ ವತಿಯಿಂದ ನಗರದ ಬಂದರ್ ರಸ್ತೆಯ ಕಂದಕ್‌ನಲ್ಲಿ ಗುರುವಾರ ಇಫ್ತಾರ್‌ಕೂಟ ಆಯೋಜನೆ ಹಾಗೂ ಆ್ಯಂಬುಲೆನ್ಸ್‌ನ್ನು ಲೋಕಾರ್ಪಣೆಗೊಳಿಸಲಾಯಿತು. ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ದುಆಗೈದು, ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ‘ಅಲ್ಲಾಹನಿಗೆ ಯಾರು ಅಚ್ಚುಮೆಚ್ಚು ಎಂದು ಓರ್ವ ವ್ಯಕ್ತಿ ಪ್ರವಾದಿ ಮುಹಮ್ಮದ್ ಪೈಗಂಬರರಿಗೆ ಪ್ರಶ್ನಿಸಿದರು. ಆಗ ಆ ಪ್ರಶ್ನೆಗೆ ಉತ್ತರಿಸಿದ ಪೈಗಂಬರರು, ಜನರಿಗೆ ಯಾರು ಉಪಕಾರ ಮಾಡುತ್ತಾರೋ ಅಂತಹವರನ್ನು ಅಲ್ಲಾಹ್ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ ಎಂದಿದ್ದರು. ಅದರಂತೆ, ಕಂದಕ್ ಮುಸ್ಲಿಂ ಜಮಾಅತ್ ವತಿಯಿಂದ ಸದ್ಯ ಲೋಕಾರ್ಪಣೆ ಗೊಳಿಸಲಾದ ಆ್ಯಂಬುಲೆನ್ಸ್‌ನಿಂದ ಹಲವಾರು ಜನರಿಗೆ ಪ್ರಯೋಜನವಾಗಲಿದೆ. ಯಾವುದೇ ಸಂದರ್ಭದಲ್ಲೂ ಕರೆ ಮಾಡಬಹುದು. ಸಾರ್ವಜನಿಕರ ಸದುಪಯೋಗಕ್ಕಾಗಿ ಆ್ಯಂಬುಲೆನ್ಸ್ ಉಚಿತ ಸೇವೆ ನೀಡಲಿದೆ ಎಂದು ಹೇಳಿದರು.

ಈ ಸಂದರ್ಭ ಕಂದಕ್ ಮುಸ್ಲಿಂ ಜಮಾಅತ್ ಸಮಿತಿ ಸದಸ್ಯ ಕೆ.ಇಬ್ರಾಹೀಂ, ಶೇಖಬ್ಬ ಮುಸ್ಲಿಯಾರ್, ಕಂದಕ್ ಕಾರ್ಪೊರೇಟರ್ ಅಬ್ದುಲ್ ಲತೀಫ್, ಅಬ್ದುಲ್ ಖಾದರ್ ಹಾಜಿ, ಅಬೂಬಕರ್ ಸಿದ್ದೀಕ್, ಉದ್ಯಮಿ ಹಾಜಿ ಅಬ್ಬಾಸ್, ಹಸನ್ ಮುಸ್ಲಿಯಾರ್, ಅಬ್ದುಲ್ ಸಲಾಂ ಕಂದಕ್, ಸಲಾಂ ಕಂದಕ್, ಅಶ್ರಫ್ ಕೆ., ಆಸಿಫ್ ಕಂದಕ್, ಸುಹೇಬ್, ಶರೀಫ್ ಕಂದಕ್, ಸಿರಾಜ್, ಸಲೀಂ, ಜಾವೀದ್, ಅಬ್ದುಲ್ ಖಾದರ್, ತೋಹಿದ್, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News