ಕಡಿಮೆ ಶುಲ್ಕದೊಂದಿಗೆ ಉನ್ನತ ಶಿಕ್ಷಣಕ್ಕಾಗಿ ಗಾಂಧಿ ನಗರ ಪ್ರಥಮ ದರ್ಜೆ ಕಾಲೇಜು
ಮಂಗಳೂರು, ಮೇ 30: ಅತ್ಯಂತ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಮಂಗಳೂರು ವಿಶ ವಿದ್ಯಾನಿಲಯದ ಸಂಯೋಜನೆ ಗೊಳಪಟ್ಟ ಸರಕಾರಿ ಪ್ರಥಮ ದರ್ಜೆ ಕಾಲೇಜು ಗಾಂಧಿನಗರ ಕಾವೂರು ಶಾಲೆಯಲ್ಲಿ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
2019-20ನೆ ಸಾಲಿನಲ್ಲಿ ಬಿ.ಎ,ಬಿ.ಕಾಂ,ಬಿಬಿಎ/ಬಿಬಿಎಂ ಮಾಡುವ ಎಸ್.ಸಿ ಎಸ್.ಟಿ ವಿದ್ಯಾರ್ಥಿಗಳು 4160 ರೂ .,ಇತರ ಹುಡುಗಿಯರು ರೂ.4340 ಇತರ ಹುಡುಗರು 5280 ರೂ. ಶುಲ್ಕ ಪಾವತಿಸಿ ಉನ್ನತ ಶಿಕ್ಷಣದಲ್ಲಿ ಪದವಿ ಪಡೆಯಬಹುದಾಗಿದೆ.
ಇದಲ್ಲದೆ ಆದಾಯ ಪ್ರಮಾಣ ಪತ್ರ ಅಥವಾ ವಿದ್ಯಾರ್ಥಿ ವೇತನ ಪಡೆದರೆ ಸರಕಾರ ಶುಲ್ಕದ ಪೂರ್ಣ ಮರುಪಾವತಿ ಪಡೆಯಬಹುದಾಗಿದೆ. ವಿಶಾಲವಾದ ಕಟ್ಟಡ, ಉನ್ನತ ಗುಣಮಟ್ಟದ ಪೂರ್ಣ ಕಾಲಿಕ ಉಪನ್ಯಾಸರನ್ನು ಹೊಂದಿರುವ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್‌ಗಳು ವಿದ್ಯಾರ್ಥಿಗಳಿಗೆ ಸೂಕ್ತ ಪಠ್ಯ ಪುಸ್ತಕಗಳನ್ನು ಒದಗಿಸುವ ಸುಸಜ್ಜಿತ ಗ್ರಂಥಾಲಯ ,ವಿಶಾಲವಾದ ಆಟದ ಮೈದಾನ,ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋತ್ಸಾಹ ,ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಉಪನ್ಯಾಸ, ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಗೆ ಸಂಬಂಧಿಸಿದ ತರಬೇತಿ ಹಾಗೂ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉನ್ನತ ಮಾಹಿತಿ ಮತ್ತು ಉಪನ್ಯಾಸ, ಸರಕಾರದ ವಿವಿಧ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ, ಮಾರ್ಗದರ್ಶನ, ಸರಕಾರದ ವಿವಿಧ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್‌ಗಳ ಸೌಲಭ್ಯಗಳು ಸೇರಿದಂತೆ ಸರಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಮಾಹಿತಿ ಮಾರ್ಗದರ್ಶನ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ದೂರವಾಣಿ ಸಂಖ್ಯೆ 0824-2482036,ಅಥವಾ 8618464215 ಅಥವಾ ಕಾಲೇಜಿನ ಇ-ಮೇಲ್ gjgckkavoor@gmail.com ಮೂಲಕ ಸಂಪರ್ಕಿಸ ಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.