ಹ್ಯಾಕ್ ಆದ ಬಿಜೆಪಿ ವೆಬ್ ಸೈಟ್ ನಲ್ಲಿ ಬೀಫ್ ಖಾದ್ಯ ಲಭ್ಯ !

Update: 2019-05-30 15:39 GMT

ಹೊಸದಿಲ್ಲಿ , ಮೇ 30 : ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗಲೇ ಅತ್ತ ಬಿಜೆಪಿ ದಿಲ್ಲಿ ಘಟಕದ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿ ಅದನ್ನು  ಬೀಫ್ ಉತ್ಪನ್ನಗಳ ಮಾರಾಟ ವೆಬ್ ಸೈಟ್ ನಂತೆ ಬದಲಾಯಿಸಲಾಗಿದೆ.

Hacked by 'Shadow_V1P3R'. ಎಂಬ ಸಂದೇಶವನ್ನು ಹಾಕಿರುವ ಹ್ಯಾಕರ್ ಗಳು ವೆಬ್ ಸೈಟ್ ನ ಹಲವು ಪೇಜ್ ಗಳಲ್ಲಿ ಬೀಫ್ ಖಾದ್ಯಗಳ ಹೆಸರು, ವಿವರಗಳನ್ನು ಹಾಕಿದ್ದಾರೆ.

ಮುಖಪುಟದಲ್ಲೂ ಮೇಲೆ ಮೆನುವಿನಲ್ಲಿ ಬಿಜೆಪಿ ಎಂದು ಇದ್ದಲ್ಲೆಲ್ಲ ಬೀಫ್ ಎಂದು ಬದಲಾಯಿಸಿಬಿಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News