ಚಿಕ್ಕಮಗಳೂರು ಮೂಲದ ವ್ಯಕ್ತಿ ನಾಪತ್ತೆ
ಮಂಗಳೂರು, ಮೇ 30: ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಚಿಕ್ಕಮಗಳೂರು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಮೂಡಿಗೆರೆ ತಾಲೂಕು ಕಲ್ಲೆಕೇರಿ ನಿವಾಸಿ ಚಂದ್ರಪ್ಪ (35) ನಾಪತ್ತೆಯಾದ ವ್ಯಕ್ತಿ. ಇವರು ಅನಾರೋಗ್ಯ ಕಾರಣದಿಂದ ಮೇ 24ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಮೇ 27ರಂದು ಬೆಳಗ್ಗೆ 3ಗಂಟೆಗೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಇವರನ್ನು ನಗರದ ರೈಲ್ವೆ ಸ್ಟೇಷನ್ ಬಳಿ ಪತ್ತೆ ಹಚ್ಚಿ ಕರೆ ತರಲಾಯಿತು. ಅದೇ ದಿನ ಸಂಜೆ 8:30ರ ವೇಳೆಗೆ ಮರಳಿ ಚೆಕ್‌ಅಪ್ ಮಾಡಲು ಹೋಗಿದ್ದಾಗ ಅಲ್ಲಿಂದಲೂ ನಾಪತ್ತೆಯಾಗಿದ್ದರು. ಕೈಯಲ್ಲಿ ಗ್ಲೂಕೋಸ್ ನೀಡಲು ಸೂಜಿಯು ಹಾಗೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾದ ಬಳಿಕ ಎಲ್ಲಿ ಹುಡುಕಾಡಿದರೂ ಇವರು ಪತ್ತೆಯಾಗದ ಕಾರಣ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ.
ಚಹರೆ: 5.3ಅಡಿ ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ, ಒರಟು ಮುಖ, ಕಪ್ಪು ತಲೆ ಕೂದಲು, ಕನ್ನಡ ಮಾತನಾಡುತ್ತಾರೆ, ಬಿಳಿ ಬಣ್ಣದ ಪೂರ್ಣ ತೋಳಿನ ಗೆರೆಯ ಶರ್ಟ್, ನೀಲಿ-ಬಿಳಿ ಬಣ್ಣದ ಲುಂಗಿ ಧರಿಸಿದ್ದಾರೆ.