×
Ad

ಮಂಗಳೂರು: ಮಹಿಳೆ ನಾಪತ್ತೆ

Update: 2019-05-30 21:43 IST

ಮಂಗಳೂರು, ಮೇ 30: ಮಾರ್ಕೆಟ್‌ಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.

ಕೃಷ್ಣಮಣಿ (42) ನಾಪತ್ತೆಯಾದವರು. ಇವರು ಮೇ 26ರಂದು ಬೆಳಗ್ಗೆ 9ಗಂಟೆಗೆ 2ಸಾವಿರ ರೂ. ಹಣವನ್ನು ಹಿಡಿದುಕೊಂಡು ಮಾರ್ಕೆಟ್‌ಗೆ ಹೋಗಿದ್ದರು. ಆದರೆ ಬಳಿಕ ನಾಪತ್ತೆಯಾಗಿದ್ದು, ಅವರನ್ನು ಎಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ.

ಚಹರೆ: 5.4 ಅಡಿ, ಕಪ್ಪು ಮೈಬಣ್ಣ, ಸಪೂರ ಶರೀರ, ಕಪ್ಪು ಬಣ್ಣ ಪ್ಯಾಂಟ್, ಬಿಳಿ ಶರ್ಟ್, ತುಳು, ಮಲೆಯಾಳ, ಕನ್ನಡ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ಸಿಕ್ಕವರು ಕೂಡಲೇ ಕಂಕನಾಡಿ ನಗರ ಠಾಣೆ ಅಥವಾ ನಗರ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News