ಉದ್ಯಮಿಗೆ ಹಲ್ಲೆ ಯತ್ನ ಪ್ರಕರಣ: ಇಬ್ಬರ ಸೆರೆ
Update: 2019-05-30 21:44 IST
ಮಂಗಳೂರು, ಮೇ 30: ಉದ್ಯಮಿಯೊಬ್ಬರಿಗೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪಾಂಡೇಶ್ವರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಉಡುಪಿ ಕಾಪು ನಿವಾಸಿ ಶೈಲೇಶ್ (29) ಮತ್ತು ಹಾವೇರಿ ನಿವಾಸಿ ಶಿವಾನಂದ್ (25) ಬಂಧಿತ ಆರೋಪಿಗಳು.
ಶೈಲೇಶ್ ಎಂಬಾತನಿಗೆ ತನ್ನದೇ ಸಂಬಂಧಿಕರಾದ ಸಿದ್ಧಾಂತ ಶೆಟ್ಟಿ ಎಂಬವರ ಮೇಲೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಿತ್ತು. ಈ ಹಿನ್ನೆಲೆಯಲ್ಲಿ ಉದ್ಯಮಿ ಸಿದ್ಧಾಂತ ಶೆಟ್ಟಿಗೆ ಹಲ್ಲೆ ಮಾಡಲು ಮೇ 28ರಂದು ಶಿವಾನಂದ್ ಜತೆಗೂಡಿ ಉದ್ಯಮಿ ವಾಸವಿರುವ ಅಪಾರ್ಟ್‌ಮೆಂಟ್ ಬಳಿ ಹೋಗಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಉದ್ಯಮಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.