×
Ad

ಮೋದಿ ಪ್ರಮಾಣ ವಚನ: ಭಿನ್ನಸಾಮರ್ಥ್ಯರೊಂದಿಗೆ ಆಚರಣೆ

Update: 2019-05-30 21:51 IST

ಉಡುಪಿ, ಮೇ 30: ನರೇಂದ್ರ ಮೋದಿ ಎರಡನೇ ಬಾರಿಗೆ ಇಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಉಪ್ಪೂರಿನ ಸ್ಪಂದನಾ ಬೌದ್ಧಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರದಲ್ಲಿ ಭೋಜನಕೂಟ ಏರ್ಪಡಿ ಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಗೆ ದಿನಬಳಕೆಯ ವಸ್ತುಗಳನ್ನು ಹಾಗೂ ವಿವಿಧ ಔಷಧಿಗಳನ್ನು ನೀಡಲಾಯಿತು. ಸಂಘಟನೆಯ ಗಣೇಶ್ ಪ್ರಸಾದ್, ವಿವೇಕ್ ಹೆಗ್ಡೆ, ನೀತಾ ಪ್ರಭು, ಜ್ಯೋತಿ ರಮಾನಾಥ್ ಶೆಟ್ಟಿ, ರಂಜಿತ್ ಶೆಟ್ಟಿ ಹಾವಂಜೆ, ಗಣೇಶ್ ಶೆಟ್ಟಿ, ರವೀಂದ್ರ ಹೇರೂರು, ಸ್ಪಂದನಾ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲ ಜನಾರ್ಧನ ಎನ್. ಉಪಸ್ಥಿತರಿದ್ದರು.

ಲಡ್ಡು, ಕೀರು ವಿತರಣೆ: ಉಡುಪಿ ತೆಂಕಪೇಟೆಯ ಬಿಜೆಪಿ ಕಾರ್ಯ ಕರ್ತರು ಮತ್ತು ರಾಷ್ಟ್ರೀಯ ಸೇವಾ ಸಂಘದ ವತಿಯಿಂದ ಇಂದು ನರೇಂದ್ರ ಮೋದಿ 2ನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಕೀರು(ಪಾಯಸ) ವಿತರಿಸಲಾಯಿತು. ಈ ಸಂಧರ್ಭದಲ್ಲಿ ನಗರಸಭಾ ಸದಸ್ಯೆ ಮಾನಸ ಸಿ.ಪೈ, ಶ್ಯಾಮ್‌ಪ್ರಸಾದ್ ಕುಡ್ವ, ಸುಶ್ಮಿತಾ ಪೈ, ರಶ್ಮಿ ಭಟ್, ಶ್ರೀಕಾಂತ್ ಪೈ, ಸುಚಿತ್ರಾ ಪೈ, ಭಾರತಿ ಚಂದ್ರಶೇಖರ ಮೊದಾದವರು ಉಪಸ್ಥಿತರಿದ್ದರು.

ಅದೇ ರೀತಿ ಉಡುಪಿ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸುಮಾರು ಎರಡು ಸಾವಿರ ಲಡ್ಡು ವಿತರಿಸಿದರು. ಬಿಜೆಪಿ ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ರಾಘವೇಂದ್ರ ಕಿಣಿ, ರವಾ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News