×
Ad

ಬಂಟ್ವಾಳ: ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು

Update: 2019-05-30 21:53 IST

ಬಂಟ್ವಾಳ, ಮೇ 30: ಆಕಸ್ಮಿಕ ವಾಗಿ ಬೆಂಕಿ ತಗಲಿ ಸುಟ್ಟ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನರಿಕೊಂಬು ಗ್ರಾಮದ ಕಲ್ಲಗ ದರ್ಖಾಸು ನಿವಾಸಿ ದಿ.ವೆಂಕಪ್ಪ ಪೂಜಾರಿ ಅವರ ಪತ್ನಿ ಸುಂದರಿ (62) ಮೃತಪಟ್ಟವರು.

ಮೇ 24ರಂದು ಮಧ್ಯಾಹ್ನ  ಮನೆಯ ಹೊರಭಾಗದಲ್ಲಿರುವ ಅಡುಗೆ ಶೆಡ್ಡಿನಲ್ಲಿರುವ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಂದರಿ ಅವರು ಮೇ 29ರಂದು ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ‌‌.

ಈ ಸಂಬಂಧ ಬಂಟ್ವಾಳ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News