ಬೆಂಗ್ರೆಯಲ್ಲಿ ಕಾಂಕ್ರಿಟೀಕರಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ
Update: 2019-05-31 20:36 IST
ಮಂಗಳೂರು, ಮೇ 31: ಪ್ರಕೃತಿ ವಿಕೋಪದ ಅನುದಾನದಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡ್‌ನ ಕುಸುಮ ಸುರೇಶ್ ಅವರ ಮನೆಯಿಂದ ಕಸಬಾ ಬೆಂಗ್ರೆ ತನಕ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಸಂಜಯ ಪ್ರಭು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ. ಪೂಜಾರಿ, ಸ್ಥಳೀಯ ಪ್ರಮುಖರಾದ ಸಲೀಂ ಬೆಂಗ್ರೆ, ಮುಹಮ್ಮದ್ ಹನೀಫ್, ರಿಯಾಜ್, ಅಮೀರ್, ಆಸಿಫ್, ಉನ್ನಾ ಸಹಿತ ಅನೇಕರು ಉಪಸ್ಥಿತರಿದ್ದರು.