ಮೂಡುಬಿದಿರೆ: 12 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು
ಮೂಡುಬಿದಿರೆ: ಪುರಸಭೆಯ 23 ವಾರ್ಡುಗಳಿಗೆ ಕಳೆದ ಮೇ 23ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಬಿಜೆಪಿ 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪುರಸಭೆಯನ್ನು ಮೊದಲ ಬಾರಿಗೆ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈ ಹಿಂದೆ 14 ಸ್ಥಾನಗನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 11 ಸ್ಥಾನ ಪಡೆದಿದೆ. ಉಳಿದಂತೆ ಸ್ಪರ್ಧೆಯಲ್ಲಿ ಗಮನ ಸೆಳೆದಿದ್ದ ಜೆಡಿಎಸ್, ಬಿಎಸ್ಪಿ ಸೇರಿದಂತೆ ಪಕ್ಷೇತರೂ ಕೂಡಾ ಖಾತೆ ತೆರೆಯಲು ವಿಫಲರಾಗಿದ್ದಾರೆ.
ಫಲಿತಾಂಶದ ಮೊದಲ ಹಂತದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವ ಲಕ್ಷಣ ಕಂಡು ಬಂದಿತ್ತಾದರೂ ಅಂತಿಮವಾಗಿ ಬಿಜೆಪಿ 12 ಸ್ಥಾನಗಳಿಗೆ ಜಿಗಿದು ಗೆಲುವಿನ ನಗೆ ಬೀರಿತು. ಮೂರನೇ ಬಾರಿಗೆ ಆಯ್ಕೆಯಾದ 3ನೇ ವಾರ್ಡಿನ ಪಿ.ಕೆ.ತೋಮಸ್ ಅತೀ ಹೆಚ್ಚು 355 ಮತಗಳ ಅಂತರದ ಗೆಲುವು ದಾಖಲಿಸಿದರೆ 11ನೇ ವಾರ್ಡಿನ ನವೀನ್ ಶೆಟ್ಟಿ ಬರೇ 1 ಮತದ ಅತೀ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ನಾಲ್ಕನೇ ಬಾರಿಗೆ ಆಯ್ಕೆಯಾದ 20ನೇ ವಾರ್ಡಿನ ಸುರೇಶ್ ಕೋಟ್ಯಾನ್ 8 ಮತಗಳ ಅಂತರ ಹಾಗೂ 19 ನೇವಾರ್ಡಿನ ಸುಜಾತ 10 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಾರ್ಡ್5 ರ ನಾಗರಾಜ್ ಪೂಜಾರಿ 637 ಅತೀ ಹೆಚ್ಚು ಮತ, 11ನೇ ವಾರ್ಡಿನ ನವೀನ್ ಶೆಟ್ಟಿ 189 ಅತೀ ಕಡಿಮೆ ಮತ ಪಡೆದು ಗೆಲುವು ಪಡೆದಿದ್ದಾರೆ. ವಾರ್ಡ್ 22ರಲ್ಲಿ ಅತೀ ಹೆಚ್ಚು 11 ನೋಟಾ ಮತಗಳು ಬಿದ್ದಿವೆ.
ಬಿಜೆಪಿಯಲ್ಲಿ ಗೆದ್ದ 12 ಸದಸ್ಯರಲ್ಲಿ ಮೂರನೇ ಬಾರಿಗೆ ಗೆದ್ದಿರುವ ಪ್ರಸಾದ್ ಕುಮಾರ್, ಎರಡನೇ ಬಾರಿಗೆ ಗೆದ್ದಿರುವ ನಾಗರಾಜ್ ಪೂಜಾರಿ ಹೊರತು ಪಡಿಸಿ 10 ಹೊಸಮುಖಗಳಿವೆ. ಈ ಪೈಕಿ 8 ಮಂದಿ ಮಹಿಳೆಯರು. 1996ರಲ್ಲಿ 1 ಸ್ಥಾನಗಳಿಂದ ಪುರಸಭೆಯಲ್ಲಿ ಬೆಳವಣಿಗೆ ಕಂಡ ಬಿಜೆಪಿ ಕಳೆದ ಬಾರಿ 5 ಸ್ಥಾನ ಗೆದ್ದಿದ್ದು ಈಗ 12 ಸ್ಥಾನ ಪಡೆದು ಅಧಿಕಾರಕ್ಕೇರಿದೆ. ಕಾಂಗ್ರೆಸ್‍ನ 11 ಸದಸ್ಯರ ಪೈಕಿ ನಾಲ್ಕನೇ ಬಾರಿಗೆ ಗೆದ್ದ ಸುರೇಶ್ ಕೋಟ್ಯಾನ್, 3ನೇ ಗೆಲುವು ಕಂಡ ಪಿ.ಕೆ.ಥಾಮಸ್, ಕೊರಗಪ್ಪ ಎರಡೇ ಗೆಲುವು ಕಂಡ ಜೊಸ್ಸಿ ಮಿನೇಜನಸ್, ಮಾಜಿ ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಮಾಜಿ ಉಪಾಧ್ಯಕ್ಷೆ ಶಕುಂತಲಾ ಹರೀಶ್, ಹೊರತು ಪಡಿಸಿದರೆ 5 ಹೊಸ ಮುಖಗಳಿವೆ. ಹೊಸ ಸದಸ್ಯರ ಪೈಕಿ 11 ಮಂದಿ ಮಹಿಳೆಯರು ಪುರಸಭೆ ಪ್ರವೇಶಿಸಿದ್ದಾರೆ.
ಬಿಜೆಪಿಯ ಗೋಪಾಲ್ ಶೆಟ್ಟಿಗಾರ್, ಹನೀಫ್ ಆಲಂಗಾರ್,ರಾಜೇಶ್ ಮಲ್ಯ, ಕೆ.ಕೃಷ್ಣರಾಜ ಹೆಗ್ಡೆ, ಜೆಡಿಎಸ್‍ನ ಪ್ರೇಮಾ ಸಾಲ್ಯಾನ್, ಪಕ್ಷೇತರ ಅನಿಲ್ ಲೋಬೋ, ಸೋತ ಪ್ರಮುಖರು. ಪಕ್ಷೇತರ ಅಭ್ಯರ್ಥಿಗಳ ಪೈಕಿ ಲೇಷ್ಮಾ ಲೋಬೋ 338 ಮತಗಳಿಸಿ ಗಮನ ಸೆಳೆದರೆ ಬಿಎಸ್‍ಪಿ ಮೂಲಕ ಸ್ಪರ್ಧಿಸಿದ್ದ ಸಾಣೂರು ಸತೀಶ್ ಸಾಲ್ಯಾನ್ ಬರೇ 1ಮತ ಪಡೆದಿದ್ದಾರೆ.
ಫಲಿತಾಂಶದ ವಿವರ:
ವಾರ್ಡ್1(ಹಿಂ.ವ.ಎ-ಮಹಿಳೆ) : ಒಟ್ಟು 833 ಮತಗಳ ಪೈಕಿ ಕಾಂಗ್ರೆಸ್‍ನ ಮಮತಾ(515 ಮತಗಳು) ಗೆಲುವು. ಬಿಜೆಪಿಯ ಆಶಾಲತಾ (303) ಬಿಎಸ್‍ಪಿಯ ಬೇಬಿ.ಎಸ್ ಸಾಲ್ಯಾನ್(13), ನೋಟಾ 2
ವಾರ್ಡ್ 2 (ಹಿಂ.ವ.ಎ): ಒಟ್ಟು 743 ಮತಗಳು. ಕಾಂಗ್ರೆಸ್‍ನ ಪುರಂದರ ದೇವಾಡಿಗ (504 ಮತಗಳು) ಗೆಲುವು. ಬಿಜೆಪಿಯ ಎಸ್.ಗೋಪಾಲ ಶೆಟ್ಟಿಗಾರ್(229) ಬಿಎಸ್‍ಪಿಯ ಎಸ್. ಸತೀಶ್ ಸಾಲ್ಯಾನ್(07) ನೋಟಾ 03
ವಾರ್ಡ್3 (ಸಾಮಾನ್ಯ) ರಲ್ಲಿ ಒಟ್ಟು 929 ಮತಗಳು. ಕಾಂಗ್ರೆಸ್‍ನ ಪಿ.ಕೆ.ಥೋಮಸ್,( 635) ಗೆಲುವು. ಬಿಜೆಪಿಯ ಭರತ್ ಡಿ.ಶೆಟ್ಟಿ (280) ಬಿಎಸ್‍ಪಿಯ ಜಿ.ಕೆ.ಸುಂದರ(11) ನೋಟಾ 03.
ವಾರ್ಡ್4 (ಹಿಂ.ವ.ಬಿ-ಮಹಿಳೆ) ಒಟ್ಟು 723 ಮತಗಳು. ಬಿಜೆಪಿಯ ಸೌಮ್ಯ ಸಂದೀಪ್ ಶೆಟ್ಟಿ (365)ಗೆಲುವು. ಕಾಂಗ್ರೆಸ್‍ನ ವಿನಯ ಜೆ.ಶೆಟ್ಟಿ(336) ಜೆಡಿಎಸ್‍ನ ಕುಶಲ ಶೆಟ್ಟಿ,(20) ನೋಟಾ 2
ವಾರ್ಡ್5 (ಹಿಂ.ವ.ಎ) ಒಟ್ಟು 1027 ಮತಗಳು. ಬಿಜೆಪಿಯ ನಾಗರಾಜ ಪೂಜಾರಿ 637 ಗೆಲುವು. ಕಾಂಗ್ರೆಸ್‍ನ ಪ್ರಕಾಶ್(343)ಜೆಡಿಎಸ್‍ನ ಸುಧೀಶ್ ಕುಮಾರ್(042)ನೋಟಾ 05
ವಾರ್ಡ್ 6(ಪ.ಜಾತಿ.-ಮಹಿಳೆ) ಒಟ್ಟು 732 ಬಿಜೆಪಿಯ ದಿವ್ಯಾ ಜಗದೀಶ್ (480) ಕಾಂಗ್ರೆಸ್‍ನ ದೀಕ್ಷಿತಾ (244) ಬಿಸ್‍ಪಿಯ ಸುನೀತಾ(08)
ವಾರ್ಡ್ 7(ಪ.ಪಂಗಡ) ಒಟ್ಟು 525 ಮತಗಳು. ಬಿಜೆಪಿಯ ರಾಜೇಶ್ ನಾಯ್ಕ್,(397) ಗೆಲುವು. ಕಾಂಗ್ರೆಸ್‍ನ ಸಂದೀಪ್(113) ಜೆಡಿಎಸ್‍ನ ದಯಾನಂದ (15)
ವಾರ್ಡ್ 8: (ಹಿಂ.ವ.ಎ-ಮಹಿಳೆ) ಒಟ್ಟು 603 ಕಾಂಗ್ರೆಸ್‍ನ ಶಕುಂತಲಾ (391)ಗೆಲುವು. ಬಿಜೆಪಿಯ ನೀತಾ ಉಮೇಶ್ ಬೋವಿ(204), ಬಿಎಸ್‍ಪಿಯ ಬೇಬಿ ಎಸ್.ಸಾಲ್ಯಾನ್(05) ನೋಟಾ 3
ವಾರ್ಡ್ 9(ಸಾಮಾನ್ಯ-ಮಹಿಳೆ) ಒಟ್ಟು500 ಬಿಜೆಪಿಯ ಶ್ವೇತಾ ಕುಮಾರಿ(272) ಗೆಲುವು. ಕಾಂಗ್ರೆಸ್‍ನ ಪದ್ಮಶ್ರೀ ಜೈನ್(135) ಪಕ್ಷೇತರ ಅಭ್ಯರ್ಥಿ ಗೀತಾ ಆಚಾರ್ಯ(92) ನೋಟಾ1.
ವಾರ್ಡ್10:( ಸಾಮಾನ್ಯ) ಒಟ್ಟು 499 ಕಾಂಗ್ರೆಸ್‍ನ ಹಿಮಾಯಿತುಲ್ ಶೇಖ್ ನಜೀರ್(198) ಗೆಲುವು.ಬಿಜೆಪಿಯ ಹನೀಫ್ (146) ಎಸ್‍ಡಿಪಿಐನ ಆಸೀಫ್ ಶೇಖ್(98) ಜೆಡಿಎಸ್‍ನ ಸಯ್ಯದ್ ಹುಸೇನ್,(25) ಸಿಪಿಐಎಂನ ಮಹಮ್ಮದ್ ತಶ್ರೀಫ್(14), ಬಿಎಸ್‍ಪಿಯ ಎಂ.ಕೆ ಅಬೂಬಕ್ಕರ್(14) ನೋಟಾ 04
ವಾರ್ಡ್11: (ಹಿಂ.ವರ್ಗ ಬಿ) ಒಟ್ಟು 486 ಬಿಜೆಪಿಯ ನವೀನ್ ಶೆಟ್ಟಿ(189)ಗೆಲುವು. ಕಾಂಗ್ರೆಸ್‍ನ ದಿಲೀಪ್ ಕುಮಾರ್ ಶೆಟ್ಟಿ (188), ಜೆಡಿಎಸ್‍ನ ಧರ್ಮೇಂದ್ರ ಪಿ.(60) ಎಸ್‍ಡಿಪಿಐಯ ಎಡ್ವರ್ಡ್ ಪಿರೇರಾ(48),ನೋಟಾ 1
ವಾರ್ಡ್12 (ಸಾಮಾನ್ಯ -ಮಹಿಳೆ) ಒಟ್ಟು 489 ಬಿಜೆಪಿಯ ಸ್ವಾತಿ ಎಸ್.ಪ್ರಭು, (264) ಗೆಲುವುಜೆಡಿಎಸ್‍ನ ಪ್ರೇಮಾ ಎಸ್. ಸಾಲ್ಯಾನ್(219), ನೋಟಾ 6
ವಾರ್ಡ್13 ( ಸಾಮಾನ್ಯ) ಒಟ್ಟು 886 ಕಾಂಗ್ರೆಸ್‍ನ ಸುರೇಶ್ ಪ್ರಭು(501) ಗೆಲುವು. ಬಿಜೆಪಿಯ ಎಂ.ರಾಜೇಶ್ ಮಲ್ಯ (342) ಜೆಡಿಎಸ್‍ನ ಹೈದರಾಲಿ (39) ಬಿಎಸ್‍ಪಿಯ ಉಮೇಶ್(02) ನೋಟಾ 2
ವಾರ್ಡ್ 14: ( ಸಾಮಾನ್ಯ) ಒಟ್ಟು 742 ಬಿಜೆಪಿಯ ಪ್ರಸಾದ್ ಕುಮಾರ್ (284) ಗೆಲುವು. ಕಾಂಗ್ರೆಸ್‍ನ ಆಲ್ವಿನ್ ವಾಲ್ಟರ್ ಡಿಸೋಜಾ,(263), ಪಕ್ಷೇತರ ಅಮರ್ ಕೋಟೆ (122) ,ಜೆಡಿಎಸ್‍ನ ಅಶೋಕ್ ಶೆಟ್ಟಿ(60) ಬಿಎಸ್‍ಪಿಯ ಸುಲೋಚನ ಎಂ(08) ನೋಟಾ 05
ವಾರ್ಡ್15 (ಸಾಮಾನ್ಯ -ಮಹಿಳೆ) ಒಟ್ಟು 789 ಕಾಂಗ್ರೆಸ್‍ನ ರೂಪಾ ಎಸ್ ಶೆಟ್ಟಿ (445)ಗೆಲುವು. ಬಿಜೆಪಿಯ ಸವಿತಾ(333) ಬಿಎಸ್‍ಪಿಯ ಸುನೀತಾ (10) ನೋಟಾ01
ವಾರ್ಡ್16( ಪ.ಜಾತಿ) ಒಟ್ಟು 826 ಕಾಂಗ್ರೆಸ್‍ನ ಕೊರಗಪ್ಪ,(492)ಗೆಲುವು. ಬಿಜೆಪಿಯ ಸೋಮೇಶ್ (309) ಸಿಪಿಐಎಂನ ಗಿರಿಜಾ(18)ಬಿಎಸ್‍ಪಿಯ ಜಗನ್ನಾಥ(05) ನೋಟಾ 02
ವಾರ್ಡ್17 (ಹಿಂ.ವ.ಎ) ಒಟ್ಟು 931: ಕಾಂಗ್ರೆಸ್‍ನ ಇಕ್ಬಾಲ್ ಯಾನೆ ಕರೀಂ (504)ಬಿಜೆಪಿಯ ಶರತ್ (400) , ಸಿಪಿಐಎಂನ ರಿಯಾಝ್ ಕೆ. (25)ಎಸ್ ಸತೀಶ್ ಸಾಲ್ಯಾನ್ ಬಿಎಸ್‍ಪಿ(1) ನೋಟಾ 1,
ವಾರ್ಡ್ 18 (ಸಾಮಾನ್ಯ ) 820 ಕಾಂಗ್ರೆಸ್‍ನ ಜೊಸ್ಸಿ ಮಿನೇಜಸ್ (456)ಗೆಲುವು ಬಿಜೆಪಿಯ ಕೆ.ಕೃಷ್ಣರಾಜ ಹೆಗ್ಡೆ(333)ಬಿಎಸ್‍ಪಿಯ ರಮೇಶ್ ಬೋದಿ(02)ü, ಎಸ್.ಡಿ.ಪಿಐಯ ಇಸ್ಮಾಯಿಲ್ (28) ನೋಟಾ 01
ವಾರ್ಡ್19ರಲ್ಲಿ(ಹಿಂ.ವ.ಎ-ಮಹಿಳೆ) ಒಟ್ಟು 618 ಬಿಜೆಪಿಯ ಸುಜಾತ ಎಸ್. ಕೋಟ್ಯಾನ್ (313)ಗೆಲುವು. ಕಾಂಗ್ರೆಸ್‍ನ ಹರಿಣಾಕ್ಷಿ(303) ನೋಟಾ 02
ವಾರ್ಡ್20 (ಸಾಮಾನ್ಯ) ಒಟ್ಟು 663 ಕಾಂಗ್ರೆಸ್‍ನ ಸುರೇಶ್ ಕೋಟ್ಯಾನ್(248) ಗೆಲುವು. ಬಿಜೆಪಿಯ ದಿನೇಶ್ (240) ಬಿಎಸ್‍ಪಿಯ ರಾಜು(21) ಪಕ್ಷೇತರ ಅನಿಲ್ ಲೋಬೋ(153) ನೋಟಾ 01
ವಾರ್ಡ್21( ಸಾಮಾನ್ಯ ಮಹಿಳೆ) ಒಟ್ಟು 948 ಬಿಜೆಪಿಯ ಜಯಶ್ರೀ(407) ಗೆಲುವು. ಕಾಂಗ್ರೆಸ್‍ನ ಪೌಲೀನ್ ಕ್ಲೋಸಿ ಪಿಂಟೋ ( 193) ಪಕ್ಷೇತರರಾಗಿ ಲೇಷ್ಮಾ ಜೋಯಲ್ ಲೋಬೋ(338) ನೋಟಾ. 10
ವಾರ್ಡ್ 22 (ಸಾಮಾನ್ಯ ಮಹಿಳೆ) ಒಟ್ಟು 842 ಬಿಜೆಪಿಯ ಕುಶಲ (507) ಕಾಂಗ್ರೆಸ್‍ನ ಸರಸ್ವತಿ (324) ನೋಟಾ 11
ವಾರ್ಡ್23( ಸಾಮಾನ್ಯ ಮಹಿಳೆ) 813 ಬಿಜೆಪಿಯ ಧನಲಕ್ಷ್ಮೀ (476) ಗೆಲುವು. ಕಾಂಗ್ರೆಸ್‍ನ ಲಕ್ಷ್ಮೀ ಗಣೇಶ್ (319) ಬಿಎಸ್‍ಪಿಯ ಲತಾ (16) ನೋಟಾ 02.
ಮೂಡುಬಿದಿರೆ ಪುರಸಭೆಯಲ್ಲಿ ಸರ್ಕಾರಿ ಯೋಜನೆ, ಅನುದಾನಗಳು ಅರ್ಹರಿಗೆ ಸಿಗುತ್ತಿಲ್ಲ ಎಂಬ ಆರೋಪಗಳಿದ್ದವು. ಇದೀಗ ಜನತೆ ಬಿಜೆಪಿಗೆ ಮೊದಲ ಬಾರಿಗೆ ಅಧಿಕಾರ ನೀಡುವ ಮೂಲಕ ಆಶೀರ್ವದಿಸಿದೆ. ಈ ಅವಕಾಶವನ್ನು ಸರ್ಕಾರದ ಸೌಲಭ್ಯಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಭೃಷ್ಠಾಚಾರ ರಹಿತ ಆಡಳಿತ ನೀಡುವುದು ಬಿಜೆಪಿಯ ಆದ್ಯತೆ. ಈ ಗೆಲುವು ಮೂಡುಬಿದಿರೆಯ ಜನತೆ ನಿನ್ನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ನೀಡಿದ ಉಡುಗೊರೆ.
ಉಮಾನಾಥ ಕೋಟ್ಯಾನ್ -ಶಾಸಕರು ಮೂಡುಬಿದಿರೆ.