×
Ad

ಭಟ್ಕಳ ಪುರಸಭೆಯಲ್ಲಿ ಮತ್ತೊಮ್ಮೆ ತಂಝೀಮ್ ಬೆಂಬಲಿತ ಆಡಳಿತ

Update: 2019-05-31 21:07 IST

ಭಟ್ಕಳ: ಮೇ 29ರಂದು ನಡೆದ ಭಟ್ಕಳ ಪುರಸಭೆಯ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಇಲ್ಲಿನ ರಾಜಕೀಯ, ಸಾಮಾಜಿಕ ಸಂಘಟನೆಯಾಗಿರುವ ತಂಝೀಮ್ ಬೆಂಬಲಿತ 19 ಅಭ್ಯರ್ಥಿಗಳು ( ಇದರಲ್ಲಿ 4ಕಾಂಗ್ರೇಸ್ ಅಭ್ಯರ್ಥಿಗಳು ಸೇರಿದ್ದಾರೆ) ಜಯಗಳಿಸುವುದರೊಂದಿಗೆ ಮತ್ತೊಮ್ಮೆ ಪುರಸಭೆಯ ಅಧಿಕಾರ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ.

23 ವಾರ್ಡುಗಳನ್ನು ಹೊಂದಿರುವ ಭಟ್ಕಳ ಪುರಸಭೆಗೆ ತಂಝೀಮ್ ನ 12 ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡಿದ್ದು ಉಳಿದ 11 ವಾರ್ಡುಗಳಿಗೆ ಮೇ 29 ರಂದು ಚುನಾವಣೆ ನಡೆದಿತ್ತು.

ಇಲ್ಲಿನ ಬಂದರ್ ರಸ್ತೆಯಲ್ಲಿರುವ ನ್ಯೂ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ಶುಕ್ರವಾರ ಬೆಳಿಗ್ಗೆ 8ಗಂಟೆಯಿಂದ ಆರಂಭಗೊಂಡಿದ್ದು ಅರ್ಧ ಗಂಟೆಯ ಬಳಿಕ ಎಲ್ಲ 11 ವಾರ್ಡುಗಳ ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಒಂದು ಬಿಜೆಪಿ, ಒಂದು ಕಾಗ್ರೇಸ್ ಹಾಗೂ 9 ಪಕ್ಷೇತರ ಅಭ್ಯರ್ಥಿಗಳು ಜಯಸಾಧಿಸಿದ್ದಾರೆ.

ಗೆದ್ದವರಲ್ಲಿ ಪ್ರಮುಖರು: ಪುರಸಭೆ ಮಾಜಿ ಅಧ್ಯಕ್ಷ  ಪರ್ವೇಝ್ ಕಾಸಿಮಜಿ, ತಂಝೀಮ್ ಮಾಜಿ ಪ್ರ.ಕಾ. ಮುಹಿದ್ದೀನ್ ಅಲ್ತಾಫ್ ಖರೂರಿ, ಕೃಷ್ಣಾನಂದಾ ಪೈ, ಫಯಾಝ್ ಮುಲ್ಲಾ ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News