ಶ್ರೀಕೃಷ್ಣ ಸುವರ್ಣ ಗೋಪುರ ಸಮರ್ಪಣೋತ್ಸವ ಉದ್ಘಾಟನೆ

Update: 2019-05-31 16:22 GMT

ಉಡುಪಿ, ಮೇ 31: ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಮಹತ್ವದ ಸಂಕಲ್ಪದಂತೆ ಇಂದಿನಿಂದ ಜೂ.10ರವರೆಗೆ ನಡೆಯುವ ಶ್ರೀಕೃಷ್ಣ ಮಠದ ಗರ್ಭಗುಡಿಗೆ ಸುವರ್ಣ ಕವಚ ಹಾಗೂ ಸುವರ್ಣ ಗೋಪುರದ ಸಮರ್ಪಣೋತ್ಸವ ಕಾರ್ಯಕ್ರಮಕ್ಕೆ ಇಂದು ಶ್ರೀಕೃಷ್ಣ ಮಠದ ರಾಜಾಂಗಣಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಾತನಾಡಿ, ನಿತ್ಯತೃಪ್ತನಾದ ಬಿಂಬ ಸ್ವರೂಪಿ ಭಗವಂತನಿಗೆ ಕಾಣಿಕೆ, ನೈವೇದ್ಯ,ಬೆಳ್ಳಿ, ಬಂಗಾರಗಳ ವ್ಯಾಮೋಹವಿಲ್ಲ. ಮಾನವರಾದ ನಾವು ಅವುಗಳನ್ನು ಭಕ್ತಿಯ ಪ್ರತೀಕವಾಗಿ ಆತ್ಮ ಸಂತೃಪ್ತಿಗಾಗಿ ದೇವರಿಗೆ ಸರ್ಮಪಿಸುತ್ತಿದ್ದೇವೆ ಎಂದರು.

ಶ್ರೀಕೃಷ್ಣ ಪುಟ್ಟ ಮಗು. ಆತನ ಗರ್ಭಗುಡಿಗೆ ಚಿನ್ನದ ಗೋಪುರವನ್ನು ಹೊದಿಸುವುದಕ್ಕೆ ಅತ್ಯಂತ ಧೈರ್ಯ ಹಾಗೂ ಶ್ರದ್ಧೆ ಬೇಕಿದೆ. ಪರ್ಯಾಯ ಶ್ರೀಗಳದ್ದು ದೊಡ್ಡ ಭಕ್ತಿ. ಇದಕ್ಕಾಗಿ ಸುವರ್ಣ ಗೋಪುರ ನಿರ್ಮಾಣಕ್ಕೆ ಮುಂದಾಗಿ ಸಲತೆ ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ಮಾತನಾಡಿ, ಶ್ರೀಆನಂದತೀರ್ಥ ಭಗವತ್ಪಾದರೇ ಸುವರ್ಣಮಯರು. ಅವರ ಸನ್ನಿಧಾನದಲ್ಲಿರುವ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಅರ್ಪಿಸುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು ಮಾತನಾಡಿ, ಶ್ರೀಆನಂದತೀರ್ಥ ಗವತ್ಪಾದರೇಸುವರ್ಣಮಯರು.ಅವರಸನ್ನಿಾನದಲ್ಲಿರುವ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಅರ್ಪಿಸುವುದು ಶ್ಲಾಘನೀಯ ಎಂದರು. ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಭಗವಂತನ ಚಿಂತನೆಯ ಜತೆಗೆ ಸಂಕಲ್ಪ ಇಟ್ಟುಕೊಳ್ಳಬೇಕು. ಆ ಮೂಲಕ ಜ್ಞಾನದ ದೀಪ ಬೆಳಗಬೇಕು. ಇದರಲ್ಲಿ ಸುವರ್ಣ ಗೋಪುರ ಪ್ರಜ್ವಲಿಸಲಿ ಎಂದರಲ್ಲದೇ, ಎಲ್ಲಾ ಭಗವದ್ಭಕ್ತರ ಸಹಕಾರದಿಂದ ಶ್ರೀಕೃಷ್ಣನಿಗೆ ಸುವರ್ಣ ಗೋಪುರದ ಸಮರ್ಪಣೆ ಕಾರ್ಯ ನಡೆಯುತ್ತಿದೆ ಎಂದರು.

ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀ, ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀ  ಉಪಸ್ಥಿತ ರಿದ್ದರು. ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ ಸ್ವಾಗತಿಸಿ, ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭಕ್ಕೆ ರಾಮೇಶ್ವರದ ರಾಮನಾಥಪುರ ಮನ್ನಾರ್ ಆದಿಮಹಾಸಂಸ್ಥಾನದ ಕುಮಾರನ್ ಸೇತುಪತಿ ಅರಸರು ಆಗಮಿಸಿದ್ದು, ಕುಮಾರನ್ ಸೇತುಪತಿ ಅವರು ರಾಮೇಶ್ವರದ ಕೋಟಿ ತೀರ್ಥ ಮತ್ತು ರಾಮೇಶ್ವರದ ಬಲಮುರಿ ಶಂಖನ್ನು ಶ್ರೀಗೆ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News