ಮುದರಂಗಡಿ ಗ್ರಾಪಂ ಪಿಲಾರು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

Update: 2019-05-31 16:28 GMT

ಪಡುಬಿದ್ರೆ, ಮೇ31: ಕಾಪು ತಾಲೂಕು ಮುದರಂಗಡಿ ಗ್ರಾಪಂನಲ್ಲಿ ತೆರವುಗೊಂಡಿದ್ದ ಪಿಲಾರು ಕ್ಷೇತ್ರದ ಒಂದು ಸ್ಥಾನಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯ ದಾಖಲಿಸಿದ್ದಾರೆ.

ಮತಗಳ ಎಣಿಕೆ ಇಂದು ನಡೆದಿದ್ದು, ಒಟ್ಟು ಚಲಾವಣೆಯಾದ 925 ಮತಗಳಲ್ಲಿ 265 ಮತಗಳನ್ನು ಪಡೆದ ವಿನೋದ ಜಾಯೆಲ್ ಮಥಾಯಸ್ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಆಲ್ವಿನ್ ಡಿಸೋಜ 183 ಮತ ಗಳಿಸಿ ಎರಡನೇ ಸ್ಥಾನ ಪಡೆದರೆ, ಅರುಣ ವಿಜಯ ಮೆಂಡೋನ್ಸಾ 160 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಹೀಗಾಗಿ ತನ್ನ ಸಮೀಪದ ಪ್ರತಿಸ್ಪರ್ಧಿ ಆಲ್ವಿನ್ ಡಿಸೋಜರನ್ನು 82 ಮತಗಳಿಂದ ಸೋಲಿಸಿದ ವಿನೋದ ಜಾಯೆಲ್ ಮಥಾಯಸ್‌ರನ್ನು ವಿಜಯಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಆರು ಮತಗಳು ತಿರಸ್ಕೃತಗೊಂಡವು.

ಉಡುಪಿ ಜಿಲ್ಲೆಯಲ್ಲಿ ನಾಲ್ಕು ಗ್ರಾಪಂಗಳ ನಾಲ್ಕು ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಇವುಗಳಲ್ಲಿ ಕೋಟ ಗ್ರಾಪಂನ ಗಿಳಿಯಾರು, ತಲ್ಲೂರು ಗ್ರಾಪಂನ ಉಪ್ಪಿನಕುದ್ರು ಹಾಗೂ ಹಾಲಾಡಿ ಗ್ರಾಪಂನ ಹಾಲಾಡಿ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News