ನಾಪತ್ತೆಯಾದ ಮಹಿಳೆಯ ಮೃತದೇಹ ಪತ್ತೆ
Update: 2019-05-31 22:05 IST
ಕಾಪು, ಮೇ 31: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆ ಯೊಬ್ಬರ ಮೃತದೇಹವು ಇಂದು ಬೆಳಗ್ಗೆ ಮಣಿಪುರ ಸೇತುವೆ ಬಳಿಯ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಕಟಪಾಡಿ ಶಾರದ ರೈಸ್‌ಮಿಲ್ ಬಳಿಯ ನಿವಾಸಿ ಗೋಪಾಲ ಪೂಜಾರಿ ಎಂಬವರ ಪತ್ನಿ ರೇಣುಕಾ(52) ಎಂದು ಗುರುತಿಸಲಾಗಿದೆ. ಮುಂಬೈಯಲ್ಲಿ ವಾಸವಾಗಿರುವ ಇವರು ರಜೆಯ ಹಿನ್ನೆಲೆಯಲ್ಲಿ ಎ.29ರಂದು ಪತಿ, ಮಕ್ಕಳೊಂದಿಗೆ ಊರಿಗೆ ಬಂದಿದ್ದರು.
ಮೇ 16ರಂದು ಬೆಳಗ್ಗೆ ಮನೆ ಸಮೀಪದಲ್ಲಿರುವ ಸಹೋದರನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ರೇಣುಕಾ ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಹಾಡಿಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.