ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಬುಶೈರ್ ರಹ್ಮಾನ್ ಗೆ ಚಿನ್ನದ ಪದಕ
Update: 2019-05-31 22:14 IST
ಮಂಗಳೂರು: ನೇಪಾಳದ ಕಾಠ್ಮಂಡುವಿನ ಕೆ.ಟಿ.ಎಂ ಸಿಟಿಯಲ್ಲಿ ಇತ್ತೀಚೆಗೆ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಪಿಯು ವಿದ್ಯಾರ್ಥಿ, ಎಸ್ಸೆಸ್ಸೆಫ್ ಕರ್ನಾಟಕ ಇದರ ಚೆಂಬುಗುಡ್ಡೆ ಶಾಖೆ ಸದಸ್ಯ ದಾರಂದಬಾಗಿಲಿನ ಮುಹಮ್ಮದ್ ಬುಶೈರ್ ರಹ್ಮಾನ್ ಒಂದು ಚಿನ್ನದ ಪದಕ ಹಾಗು ಒಂದು ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಅಂತರ್ ರಾಷ್ಟ್ರ ತರಬೇತುದಾರ ಹಾಗು ತೀರ್ಪುಗಾರರಾದ ದರ್ಣಪ್ಪ.ಕೆ ಇವರಿಂದ ತರಬೇತಿ ಪಡೆದ ಬುಶೈರ್ ರಹ್ಮಾನ್ ಯು.ಎಂ ಬಶೀರ್ ಹಾಗು ಹಲೀಮ ದಂಪತಿಯ ಪುತ್ರ.