ಮಂಗಳೂರು: ಗುಡ್‌ಫ್ರೈಡೆ ರಜೆ ರದ್ದು ವಿರೋಧಿಸಿ ಸಿಎಂಗೆ ಮನವಿ
ಮಂಗಳೂರು, ಜೂ.1: ಶುಭ ಶುಕ್ರವಾರದ (ಗುಡ್ ಫ್ರೆಡೆ) ರಜೆಯನ್ನು ರದ್ದು ಮಾಡಲು ಸರಕಾರವು ನಡೆಸುತ್ತಿರುವ ಆಲೋಚನೆಯ ವಿರುದ್ಧ ಮಂಗಳೂರು ಧರ್ಮಪ್ರಾಂತದ ನಿಯೋಗವು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಿತು.
ಧರ್ಮಪ್ರಾಂತದ ಶ್ರೇಷ್ಠ ಗುರು ವಂ.ಮ್ಯಾಕ್ಸಿಂ ನೊರೊನ್ಹಾ ಮುಂದಾಳತ್ವದಲ್ಲಿ ನಿಯೋಗವು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕ್ರೈಸ್ತ ಸಮುದಾಯದ ಈ ಬೇಡಿಕೆಯನ್ನು ಮುಖ್ಯಮಂತ್ರಿಗೆ ಸಲ್ಲಿಸುವುದಾಗಿ ತಿಳಿಸಿದರು.
ನಿಯೋಗದಲ್ಲಿ ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ವಿಕ್ಟರ್ ವಿಜೆಯ್ ಲೋಬೊ, ಕಥೋಲಿಕ ವಿದ್ಯಾ ಮಂಡಳಿ ಕಾರ್ಯದರ್ಶಿ ವಂ. ಆಂಟನಿ ಶೆರಾ, ಶ್ರೀಸಾಮಾನ್ಯರ ಆಯೋಗದ ಕಾರ್ಯದರ್ಶಿ ವಂ. ಜೆ.ಬಿ.ಕ್ರಾಸ್ತಾ, ಕೆನಾರಾ ಸಂಪರ್ಕ ಕೇಂದ್ರದ ನಿರ್ದೇಶಕ ವಂ. ರಿರ್ಚಾಡ್ ಡಿಸೋಜ, ಕಥೋಲಿಕ್ ಕೌನ್ಸಿಲ್ ಆಫ್‌ಇಂಡಿಯಾದ ಸದಸ್ಯ ಸುಶೀಲ್ ನೊರೊನ್ಹಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಮತ್ತಿತರಿದ್ದರು.