ಸಂತ ತೇರೆಸಾ ಚರ್ಚ್‌ಗೆ ನೂತನ ಧರ್ಮಗುರು ವಂ.ಫಾ.ಅಲ್ಬನ್ ಡಿಸೋಜ
Update: 2019-06-01 19:57 IST
ಮಂಗಳೂರು, ಜೂ.1: ನಗರದ ಸಂತ ತೇರೆಸಾ ಚರ್ಚ್ ಪಾಲ್ದನೆಗೆ ಹೊಸ ಧರ್ಮಗುರುಗಳಾಗಿ ನೇಮಿಸಲ್ಪಟ್ಟ ವಂ.ಫಾ.ಅಲ್ಬನ್ ಡಿಸೋಜ ಅವರನ್ನು ನೀರ್ಕನ್ ಚರ್ಚ್‌ನಿಂದ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಗರ ಪ್ರಾಂತದ ಪ್ರಧಾನ ಧರ್ಮಗುರು ವಂ.ವಿಕ್ಟರ್ ಮಚಾದೊ ಧರ್ಮಪ್ರಾಂತದ ಪರವಾಗಿ ಉಪಸ್ಥಿತರಿದ್ದರು.
ಈ ಹೊಸ ಗುರುಗಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಬಂಟ್ವಾಳ ಪ್ರಾಂತದ ಪ್ರಧಾನ ಧರ್ಮಗುರು ವಂ.ಫಾ.ವಾಲ್ಟರ್ ಡಿಮೆಲ್ಲೊ, ನಿರ್ಕನ್ ಚರ್ಚ್‌ನ ಹೊಸಧರ್ಮಗುರು ಲಿಯೋ ಡಿಸೋಜ, ಸಂತ ಅನ್ನಾ ಪ್ರಾಂಶುಪಾಲ ವಂ. ಪೌಲ್ ಕ್ರಾಸ್ತಾ ಹಾಗೂ ಸ್ವ ನಿವೃತ್ತ ಹೊಂದಿದ ಸಂತ ತೇರೆಸಾ ಚರ್ಚ್‌ನ ಧರ್ಮಗುರು ವಂ.ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್, ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಶನ್ ಲಸ್ರಾದೊ, ಕಾರ್ಯದರ್ಶಿ ವೀಣಾ ಲೋಬೊ ಉಪಸ್ಥಿತರಿದ್ದರು.