ಈದುಲ್ ಫಿತ್ರ್: ನೀರು ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ- ಎಸ್‌ಡಿಪಿಐ
Update: 2019-06-01 21:20 IST
ಮಂಗಳೂರು, ಜೂ.1: ಕಳೆದ ಎರಡು ತಿಂಗಳಿನಿಂದ ದ.ಕ. ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯು ಉದ್ಭವಿಸಿದ್ದು, ಇದಕ್ಕೆ ಪರ್ಯಾಯವಾಗಿ ವಾರಕ್ಕೆ ಎರಡು ಸಲ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿರುವುದು ಸ್ವಾಗತಾರ್ಹ. ಈದುಲ್ ಫಿತ್ರ್ ಪ್ರಯುಕ್ತ ನೀರು ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಳೆದ ಒಂದು ತಿಂಗಳಿನಿಂದ ಉಪವಾಸ ನಿರತರಾಗಿರುವ ಮುಸ್ಲಿಮರು ಇನ್ನೆರಡು ದಿನಗಳಲ್ಲಿ ಈದುಲ್ ಫಿತ್ರ್ ಆಚರಿಸಲಿದ್ದಾರೆ. ವಾರಕ್ಕೆ ಎರಡು ಸಲ ನೀರು ಸರಬರಾಜು ಆಗುವುದರಿಂದ ಹಬ್ಬಕ್ಕೆ ತುಂಬಾ ಸಮಸ್ಯೆಗಳು ಉದ್ಬವಿಸುವ ಸಾಧ್ಯತೆ ಇದೆ. ಹಬ್ಬದ ತನಕ ನಿರಂತರವಾಗಿ ದಿನನಿತ್ಯ ನೀರು ಸರಬರಾಜು ಮಾಡಿ ಈದುಲ್ ಫಿತ್ರ್ ಹಬ್ಬಕ್ಕೆ ಯಾವುದೇ ಸಮಸ್ಯೆಗಳು ಆಗದಂತೆ ನೋಡಿ ಕೊಳ್ಳಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.