×
Ad

ಉಡುಪಿ: ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಪರಿಸರ ಜಾಗೃತಿ

Update: 2019-06-01 21:24 IST

ಉಡುಪಿ, ಜೂ.1:  ಒಂದು ಚಿತ್ರ ಸಾವಿರ ಪದಗಳು ಹೇಳುವ ಕಥೆಯನ್ನು ಹೇಳುತ್ತದೆ ಎಂಬ ಮಾತೊಂದಿದೆ. ಶನಿವಾರ ಒಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ಚಿತ್ರಕಲಾ ರ್ಸ್ಪೆಈಮಾತನ್ನುಅಕ್ಷರಶಃನಿಜವಾಗಿಸಿತು.ಶಾಲೆಯನಳಂದಾಸಾಂಗಣದಲ್ಲಿ ವಿದ್ಯಾರ್ಥಿಗಳ ವರ್ಣದಲ್ಲಿ ಅದ್ದಿದ ಕುಂಚದಿಂದ ಅರಳಿದ ಚಿತ್ತಾರಗಳು ಪರಿಸರ ಕಾಳಜಿಯ ಸಂದೇಶವನ್ನು ಎತ್ತಿ ಸಾರುತ್ತಿದ್ದವು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಾಯುಮಾಲಿನ್ಯ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 150 ವಿದ್ಯಾರ್ಥಿಗಳು, ‘ಮಾಲಿನ್ಯ ತಡೆಯಿರಿ ದೇಶ ರಕ್ಷಿಸಿ’, ‘ಗೋ ಗ್ರೀನ್’, ‘ವಾಯು ಮಾಲಿನ್ಯ ತಡೆದು ಶುದ್ದ ಗಾಳಿ ಪಡೆಯಿರಿ’ ಎಂಬ ಸಂದೇಶದ ಜೊತೆಗೆ ವಾಯುಮಾಲಿನ್ಯ ತಡೆಗೆ ಗಿಡಗಳನ್ನು ನೆಟ್ಟು ಪೋಷಿಸಿ, ತಾವೂ ಗಿಡ ನೆಟ್ಟು ಇತರರಿಗೂ ಗಿಡ ನೆಡಲು ಪ್ರೋತ್ಸಾಹಿಸಿ ಎಂಬ ಪರಿಸರ ಕಾಳಜಿಯನ್ನು ತಾವು ಬರೆದ ಬಣ್ಣ ಬಣ್ಣ ಚಿತ್ತಾರಗಳ ಮೂಲಕ ಸಾರಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಾಯುಮಾಲಿನ್ಯ ಜಾಗೃತಿ ಮೂಡಿಸುವ ಚಿತ್ರಕಲಾ ರ್ಸ್ಪೆಯಲ್ಲಿಜಿಲ್ಲೆಯವಿವಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 150 ವಿದ್ಯಾರ್ಥಿಗಳು, ‘ಮಾಲಿನ್ಯ ತಡೆಯಿರಿ ದೇಶ ರಕ್ಷಿಸಿ’, ‘ಗೋ ಗ್ರೀನ್’, ‘ವಾಯು ಮಾಲಿನ್ಯ ತಡೆದು ಶುದ್ದ ಗಾಳಿ ಪಡೆಯಿರಿ’ ಎಂಬ ಸಂದೇಶದ ಜೊತೆಗೆ ವಾಯುಮಾಲಿನ್ಯ ತಡೆಗೆ ಗಿಡಗಳನ್ನು ನೆಟ್ಟು ಪೋಷಿಸಿ, ತಾವೂ ಗಿಡ ನೆಟ್ಟು ಇತರರಿಗೂ ಗಿಡ ನೆಡಲು ಪ್ರೋತ್ಸಾಹಿಸಿ ಎಂಬ ಪರಿಸರ ಕಾಳಜಿಯನ್ನು ತಾವು ಬರೆದ ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ಸಾರಿದರು. ಶನಿವಾರ ನಡೆದ ಚಿತ್ರಕಲಾ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆದಿದ್ದು, ಪ್ರಾಥಮಿಕ ವಿಭಾಗದಲ್ಲಿ 1ರಿಂದ 4, ಮಾಧ್ಯಮಿಕ ವಿಭಾಗದಲ್ಲಿ 5ರಿಂದ 7 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 8ರಿಂದ 10ನೇ ತರಗತಿಯ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಜೂ.5ರಂದು ಜಿಲ್ಲಾಡಳಿತ ವತಿಯಿಂದ ಪಡುಬಿದ್ರೆಯ ಬಂಟರ ಭವನದಲ್ಲಿ ನಡೆಯುವ ವಿಶ್ವ ಪರಿಸರ ದಿನಾಚರಣೆಯಂದು ಈ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಚಿತ್ರಕಲಾ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ್, ಚಿತ್ರಕಲೆ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ವಾಯುಮಾಲಿನ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲೆಯ ಎಲ್ಲಾ ಮಕ್ಕಳಿಗೂ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕಾರ್ಕಳ, ಹೆಬ್ರಿಗಳಲ್ಲಿ ಈ ರೀತಿ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದರು.

ಜೂನ್ 5ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯಂದು ಸ್ವಚ್ಚತೆ ಹಾಗೂ ಇತರ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡ ಉಡುಪಿ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ, ಉಡುಪಿ, ಕುಂದಾಪುರ, ಕಾರ್ಕಳ ತಾಲೂಕಿನ 3 ಗ್ರಾಪಂಗಳಲ್ಲಿರುವ ಪರಿಸರ ಕಾಳಜಿ ಹೊಂದಿರುವ ವ್ಯಕ್ತಿಗಳನ್ನು ಹಾಗೂ ಪರಿಸರ ಕಾಳಿಜಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಶಾಲೆಗಳನ್ನು ಗೌರವಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಲಕ್ಷ್ಮೀಕಾಂತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News