ಯುವತಿ ನಾಪತ್ತೆ
ಉಡುಪಿ, ಜೂ.1: ಕಾರ್ಕಳ ತಾಲೂಕು ಕಣಜಾರು ಗ್ರಾಮದ ರವೀಂದ್ರ ನಾಯಕ್ ಎಂಬವರ ಪುತ್ರಿ ಸುಶ್ಮಾ (18) ಮೇ 31ರಂದು ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಕೇಳಿ ಬರುವುದಾಗಿ ಬೆಳಗ್ಗೆ 9:20ರ ಸುಮಾರಿಗೆ ಮನೆಯಿಂದ ಹೋದವರು ಮರಳಿ ಬಾರದೇ ಕಾಣೆಯಾಗಿದ್ದಾರೆ. ಒಮ್ಮೆ ತಾಯಿಗೆ ಕರೆ ಮಾಡಿದ್ದ ಸುಶ್ಮಾರ ಮೊಬೈಲ್ 11:30ರ ನಂತರ ಸ್ವಿಚ್‌ಆಫ್ ಆಗಿದೆ ಎಂದು ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.
5 ಅಡಿ 1 ಇಂಚು ಎತ್ತರವಿರುವ ಸುಶ್ಮಾ, ಗೋಧಿ ಮೈಬಣ್ಣ, ಕನ್ನಡ, ತುಳು, ಕೊಂಕಣಿ, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಪೊಲೀಸ್ ಅಧೀಕ್ಷಕರು, ಉಡುಪಿ(ಮೊ:9480805401), ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಬಾಗ (9480805420), ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ (9480805432), ಪೊಲೀಸ್ ಉಪ ನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ (9480805452/0820-2542248), ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.