×
Ad

‘ಚಿಣ್ಣ ಕೃಷ್ಣ’ನಿಂದ ಚಿನ್ನದ ನಾಡಾಗಲಿ: ಪೇಜಾವರಶ್ರೀ

Update: 2019-06-01 21:52 IST

ಉಡುಪಿ, ಜೂ. 1: ಉಡುಪಿಯ ಕಡಗೋಲು ಶ್ರೀಕೃಷ್ಣ ಚಿಣ್ಣ (ಬಾಲಕ) ಸ್ವರೂಪಿ. ಈತನಿಗೆ ಪರ್ಯಾಯ ಪಲಿಮಾರುಶ್ರೀಗಳು ಚಿನ್ನದ ಗೋಪುರವನ್ನು ಸಮರ್ಪಿಸುವುದರ ಮೂಲಕ ಇದು ಚಿನ್ನದ ನಾಡಾಗಲಿ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಹಾರೈಸಿದ್ದಾರೆ.

ಉಡುಪಿ ಶ್ರೀಕೃಷ್ಣಮಠದ ಗರ್ಭಗುಡಿಗೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿಯವರು ನಿರ್ಮಿಸಿದ ಸ್ವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಶನಿವಾರ ಜೋಡುಕಟ್ಟೆಯಿಂದ ಶ್ರೀಕೃಷ್ಣಮಠದವರೆಗೆ ಶ್ರೀ ಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ, ಕಿದಿಯೂರು ವಿಷ್ಣುಮೂರ್ತಿ ಮತ್ತು ವನದುರ್ಗಾ ಸೇವಾ ಸಮಿತಿಗಳ ನೇತೃತ್ವದಲ್ಲಿ ನಡೆದ ಸುವರ್ಣ ಶಿಖರ ಮತ್ತು ರಜತ ಕಲಶಗಳ ಅದ್ಧೂರಿ ಮೆರವಣಿಗೆಯ ಭವ್ಯ ಶೋಭಾಯಾತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪೇಜಾವರಶ್ರೀಗಳು ಇದೊಂದು ಐತಿಹಾಸಿಕ, ಅೂತಪೂರ್ವ ಕಾರ್ಯಕ್ರಮ ಎಂದರು.

ಭಗವಂತನಿಗೆ ನಮ್ಮ ಹಣ, ಚಿನ್ನ, ಬೆಳ್ಳಿ ಯಾವುದೂ ಬೇಡ. ಆತನಿಗೆ ಅದರಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ಆತ ನಿತ್ಯತೃಪ್ತ. ಆದರೆ ಲೋಕ ಕಲ್ಯಾಣಾರ್ಥವಾಗಿ ಇಂತಹ ಭಗವತ್ಪ್ರೇರಿತ ಕಾರ್ಯಕ್ರಮಗಳನ್ನು ಪಲಿಮಾರುಶ್ರೀ ಗಳು ಆಯೋಜಿಸಿದ್ದಾರೆ ಎಂದವರು ನುಡಿದರು.

ಶ್ರೀಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀ ಉಪಸ್ಥಿತರಿದ್ದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ಜಿ.ಶಂಕರ್, ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂು ಶುಭ ಕೋರಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಟ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ಭುವನೇಂದ್ರ ಕಿದಿಯೂರು, ಹರಿಯಪ್ಪಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಮೆರವಣಿಗೆ ರಥಬೀದಿಗೆ ಆಗಮಿಸಿದ ಬಳಿಕ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಭೆ ನಡೆಯಿತು.

ರಜತ ಕಲಶಗಳ ರಥ ಟ್ಯಾಬ್ಲೋ

1008 ಬೆಳ್ಳಿಯ ಕಲಶಗಳನ್ನು ಬಳಸಿ ಮಾಡಲಾದ ಶ್ರೀಕೃಷ್ಣಮಠದ ಮೂರು ರಥಗಳ ಪತಾಕೆಯ ಅತ್ಯಾಕರ್ಷಕ ಸ್ತಬ್ಧಚಿತ್ರ, ಕೃಷ್ಣಮಠದ ಗರ್ಭಗುಡಿಯನ್ನು ಹೋಲುವ ತದ್ರೂಪಿ ಕಲಾಕೃತಿ, ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುವ ‘ಮಹಾಭಾರತ’ ಧಾರಾವಾಹಿಯ ಶ್ರೀಕೃಷ್ಣ, ಅರ್ಜುನ ಮತ್ತು ಭೀಮನ ಪಾತ್ರಧಾರಿ ಗಳಾದ ಸೌರಬ್ ಜೈನ್, ಶಹೀರ್ ಶೇಖ್ ಹಾಗೂ ಶರತ್ ಕೋರೆ ಅವರು ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ನಡೆದ ವೈಭವದ ಶೋಭಾಯಾತ್ರೆಯ ವುುಖ್ಯ ಆಕರ್ಷಣೆಯಾಗಿದ್ದರು.

ಆಕರ್ಷಕವಾದ ವಿವಿಧ ಟ್ಯಾಬ್ಲೋಗಳು, ಭಜನಾ ತಂಡಗಳು ಪರ್ಯಾಯ ಮೆರವಣಿಗೆಯನ್ನು ನೆನಪಿಸಿದವು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಹೋದ ಮೆರವಣಿಗೆಯ ದಾರಿಯುದ್ದಕ್ಕೂ ಕಿಕ್ಕಿರಿದ ನೆರೆದ ಜನಸಂದಣಿ ಸಂಜೆಯ ವೇಳೆ ನಡೆದ ಶೋಭಾಯಾತ್ರೆಯನ್ನು ಕುತೂಹಲದಿಂದ ವೀಕ್ಷಿಸಿದರು.

ಮುಸ್ಲಿಮರಿಂದ ಪಾನೀಯ ವಿತರಣೆ:  ನಗರದ ಕೋರ್ಟ್ ಎದುರು ಪೇಜಾವರ ಸ್ವಾಮೀಜಿಗಳ ಮುಸ್ಲಿಂ ಅಭಿಮಾನಿಗಳ ಬಳಗದ ವತಿಯಿಂದ ಮೆರವಣಿಗೆ ಯಲ್ಲಿ ಭಾಗವಹಿಸಿದವರಿಗೆ ತಂಪು ಪಾನೀಯದ ವಿತರಣೆ ನಡೆಯಿತು. ಬಳಗದ ಸದಸ್ಯರು ಉಪವಾಸನಿರತರಾಗಿದ್ದರೂ ಬಾಯಾರಿಕೆಯಿಂದ ಬಳವಳಿದ ಜನರಿಗೆ ತಂಪು ಪಾನೀಯ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News