×
Ad

ಸರಕಾರದಿಂದ ದಾಸಸಾಹಿತ್ಯ ನಿರ್ಲಕ್ಷ: ಪ್ರೊ.ಎ.ವಿ.ನಾವಡ

Update: 2019-06-01 21:54 IST

ಉಡುಪಿ, ಜೂ.1: ಶರಣ ವಚನ ಸಾಹಿತ್ಯ ಸರಕಾರದ ಬೆಂಬಲದಿಂದ ನಾಡಿನ ವಿದ್ವಾಂಸರಿಂದ ಅಧ್ಯಯನಕ್ಕೆ ಒಳಪಟ್ಟಿದೆ. ಆದರೆ ದಾಸ ಸಾಹಿತ್ಯ ನಿರ್ಲಕ್ಷಕ್ಕೆ ಒಳಗಾಗಿದ್ದು, ಪ್ರಚಾರಕ್ಕೆ ಆದ್ಯತೆ ನೀಡದ ಕಾರಣ ಪಾರಂಪರಿಕ ಹಾಡುಗಾರಿಕೆ ನಷ್ಟವಾಗುತ್ತಿದೆ ಎಂದು ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ ಅಭಿಪ್ರಾಯಪಟ್ಟಿದ್ದಾರೆ.

ಪರ್ಯಾಯ ಪಲಿಮಾರು ಮಠದ ವತಿಯಿಂದ ಮಠದ ಗರ್ಭಗುಡಿಗೆ ನಿರ್ಮಾಣಗೊಂಡ ಸುವರ್ಣ ಗೋಪುರ ಸಮರ್ಪಣೋತ್ಸವ ಅಂಗವಾಗಿ ರಾಜಾಂಗಣದಲ್ಲಿ ಶುಕ್ರವಾರ ನಡೆದ ದಾಸ ಸಾಹಿತ್ಯ ಗೋಪುರಮ್ ಚಿಂತನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮನೆಗಳಲ್ಲಿರುವ ಹಸ್ತಪ್ರತಿಗಳ ಸಂಗ್ರಹ, ದಾಸ ಸಾಹಿತ್ಯಕ್ಷೇತ್ರದಲ್ಲಿ ಸವಾಲಿನ ಕಾರ್ಯವಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಉಡುಪಿಯಲ್ಲಿ ಪಾವಂಜೆ ಗುರುರಾಯರು ಈ ಕಾರ್ಯವನ್ನು ಮಾಡಿ, ಅನೇಕ ದಾಸರ ಪದಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಅವರ ಬಳಿಕ ಈ ಕೆಲಸ ಸ್ಥಗಿತವಾಗಿದೆ. ಸರಕಾರ ಕನಕದಾಸ ಸಂಶೋಧನ ಪೀಠಗಳನ್ನು ಅನೇಕ ವಿವಿಗಳಲ್ಲಿ ಸ್ಥಾಪಿಸಿದೆ. ಆದರೆ ಸಮಗ್ರ ದಾಸ ಸಾಹಿತ್ಯ ಸಂಶೋಧನೆಯತ್ತ ಗಮನಹರಿಸಿಲ್ಲ ಎಂದವರು ನುಡಿದರು.

ಹಂಪಿ ವಿವಿಯಲ್ಲಿ ಅನೇಕ ಸಂಶೋಧನಾ ಪೀಠಗಳಿಗೆ ಸರಕಾರ ಕೋಟಿ ಕೋಟಿ ರೂ. ಅನುದಾನ ನೀಡುತ್ತಿದೆ. ಪುರಂದರ ಪೀಠಕ್ಕೆ ಮಾತ್ರ 10 ಲಕ್ಷ ರೂ. ನೀಡಿದೆ. ಇದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಈ ಬಗ್ಗೆ ಸರಕಾರದಿಂದ ಹೆಚ್ಚಿನ ನಿರೀಕ್ಷೆಯೂ ಇಲ್ಲ. ಹೀಗಾಗಿ ದಾಸ ಸಾಹಿತ್ಯ ಅಧ್ಯಯನಕ್ಕೆ ಮಾಧ್ವ ಮಠಗಳು ಮುಂದಾಗಬೇಕು. ಇದಕ್ಕೆ ಪಾರಂಪರಿಕ ಪಂಡಿತರೂ, ಆಧುನಿಕ ಶಾಸ್ತ್ರ ಪರಿಣತರೂ ಅಗತ್ಯವಿದೆ ಎಂದರು.

ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ತಮ್ಮ ಆಶಯ ಭಾಷಣದಲ್ಲಿ ದಾಸ ಸಾಹಿತ್ಯ ಸರಳ ವ್ಯಾಖ್ಯಾನ, ಅನುಸಂಧಾನವನ್ನು ಜನಮನಕ್ಕೆ ತಿಳಿಸುವ ಕಾರ್ಯ ಮಾಡುತ್ತಿದೆ. ಸಾಹಿತ್ಯದ ಬೇರೆ ಬೇರೆ ಭಾವಗಳನ್ನು ಮೂಡಿಸುವ ಕಾರ್ಯವನ್ನು ಹರಿದಾಸರು ಮಾಡಿದ್ದಾರೆ. ಜನರಿಗೆ ಸರಳವಾಗಿ ಅಧ್ಯಾತ್ಮವನ್ನು ತಿಳಿಸಿದ್ದಾರೆ. ಹೀಗಾಗಿ ವಿಜಯನಗರ ವೈಭವದ ಕಾಲದಲ್ಲಿಯೂ ಪುರಂದರ ದಾಸರು ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂದು ಹಾಡಿದ್ದಾರೆ ಎಂದರು.

ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ದಾಸ ಸಾಹಿತ್ಯದ ಜತೆಗೆ ವ್ಯಾಸ ಸಾಹಿತ್ಯವನ್ನೂ ಅಧ್ಯಯನ ಮಾಡಿದರೆ ಮಾತ್ರ ಶಾಸ್ತ್ರಗಳ ಅರಿವು ಲಭಿಸುತ್ತದೆ. ವಾದಿರಾಜ ಕೃತಿಗಳ ಬಗ್ಗೆ ಸಂಶೋಧನೆ ಮತ್ತು ಪ್ರಕಟಣೆಗೆ ಅದಮಾರು ಮಠ ಮತ್ತು ಪಲಿಮಾರು ಮಠ ಸದಾ ಸಿದ್ಧವಿದೆ ಎಂದರು.

ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ದಾಸ ಸಾಹಿತ್ಯದ ಜತೆಗೆ ವ್ಯಾಸ ಸಾಹಿತ್ಯವನ್ನೂ ಅ್ಯಯನಮಾಡಿದರೆಮಾತ್ರಶಾಸ್ತ್ರಗಳಅರಿವುಲಭಿಸುತ್ತದೆ.ವಾದಿರಾಜಕೃತಿಗಳಬಗ್ಗೆಸಂಶೋನೆ ಮತ್ತು ಪ್ರಕಟಣೆಗೆ ಅದಮಾರು ಮಠ ಮತ್ತು ಪಲಿಮಾರು ಮಠ ಸದಾ ಸಿದ್ಧವಿದೆ ಎಂದರು. ಹಿರಿಯ ವಿದ್ವಾಂಸರಾದ ಬೆಂಗಳೂರಿನ ಡಾ. ಮುರಳೀಧರ ಎಚ್.ಎನ್., ಮೈಸೂರಿನ ಡಾ.ಎನ್.ಕೆ. ರಾಮಶೇಷನ್, ಡಾ.ಎಂ. ಶ್ರೀನಿವಾಸಾಚಾರ್ಯ, ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಂಗಳೂರು ಪ್ರಬಂಧ ಮಂಡಿಸಿದರು.

ಡಾ. ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News