ಸರ ಎಳೆದು ಪರಾರಿ: ಆರೋಪಿ ಬಂಧನ; 1.63 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ

Update: 2019-06-01 16:44 GMT

ಉಡುಪಿ, ಜೂ.1: ಗ್ರಾಹಕರ ಸೋಗಿನಲ್ಲಿ ಹಾವಂಜೆ ಬಾಣಬೆಟ್ಟಿನಲ್ಲಿ ಒಂಟಿ ಮಹಿಳೆ ಇದ್ದ ಅಂಗಡಿಗೆ ಬಂದು ಮಹಿಳೆಯ ಸರ ಕದ್ದು ಪರಾರಿಯಾ ಗಿದ್ದ  ಆರೋಪಿಯನ್ನು ಉಡುಪಿ ಡಿಸಿಐಬಿ ಪೊಲೀಸರು ಶುಕ್ರವಾರ ವಿಟ್ಲದಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ದಕ್ಷಿಣಕನ್ನಡ ಜಿಲ್ಲೆ ವಿಟ್ಲ ವಕ್ಕೆತ್ತೂರಿನ ನಿವಾಸಿ ರವಿ ಪೂಜಾರಿ (31) ಎಂದು ಗುರುತಿಸಲಾಗಿದೆ. ಈತ ಮೇ 15ರಂದು ಹಾವಂಜೆಯ ಅಂಗಡಿಗೆ ಬಂದು ವ್ಯಾಪಾರದ ಸೋಗಿನಲ್ಲಿ ಮಹಿಳೆಯ ಸರ ಕದ್ದು ಪರಾರಿಯಾಗಿದ್ದ. ಇದೀಗ ಪೊಲೀಸರು ಆರೋಪಿಯಿಂದ ನಾಲ್ಕುವರೆ ಪವನ್ ಚಿನ್ನದ ಕರಿಮಣಿ ಸರ, ಸ್ಕೂಟರ್, ಮೊಬೈಲ್ ಸಹಿತ 1,63,500 ರೂ., ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

 ಆರೋಪಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಪೂವಯ್ಯ, ಪಿಎಸ್‌ಐ ರಾಘವೇಂದ್ರ, ಎಎಸ್‌ಐ ಗೋಪಾಲ ಪೂಜಾರಿ, ಸಿಬಂದಿಗಳಾದ ದಿಲೀಪ್, ಪ್ರಸಾದ್ ಕುಂದರ್, ಪ್ರವೀಣ, ವೆಂಕಟರಮಣ, ತಾಂತ್ರಿಕ ವಿಭಾಗದ ಶಿವಾನಂದ, ದಿನೇಶ, ನಿತಿನ್, ಡಿಸಿಐಬಿ ಎಎಸ್‌ಐ ರವಿಚಂದ್ರ, ಸಿಬಂದಿ ಸುರೇಶ್, ಸಂತೋಷ್ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ರಾಜ್‌ಕುಮಾರ್ ಬೈಂದೂರು, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲ ರಾಘವೇಂದ್ರ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News