ಪುಲ್ವಾಮದಲ್ಲಿ ಎನ್‌ಕೌಂಟರ್ ಹತರಾದ ಇಬ್ಬರು ಉಗ್ರರಲ್ಲಿ ಓರ್ವ ಪಾಕಿಸ್ತಾನದ ಪ್ರಜೆ

Update: 2019-06-01 17:01 GMT

 ಶ್ರೀನಗರ, ಜೂ. 1: ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶೆ ಮುಹಮ್ಮದ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದಾರೆ. ಇವರಲ್ಲಿ ಓರ್ವ ಪಾಕಿಸ್ತಾನದ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಹಾಗೂ ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆ ಶುಕ್ರವಾರ ನಡೆಸಿದ ಎರಡು ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹಾಗೂ ಅವರ ಸಕ್ರಿಯ ಸಹವರ್ತಿಗಳು ಹತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರಾದ ಮಿದೂರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಉಗ್ರರಲ್ಲಿ ಓರ್ವನನ್ನು ದಾರ್ಗಲಿ ಗುಂಡ್ ಟ್ರಾಲ್‌ನ ನಿವಾಸಿ ಯವಾರ್ ಅಹ್ಮದ್ ನಝರ್ ಎಂದು ಗುರುತಿಸಲಾಗಿದೆ.

ಇನ್ನೋರ್ವನನ್ನು ಪಾಕಿಸ್ತಾನದ ಪ್ರಜೆ ಉಮರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ ಇವರಿಬ್ಬರು ಜೈಶೆ ಮುಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು. ಅಲ್ಲದೆ ಇವರು ಈ ಪ್ರದೇಶದಲ್ಲಿ ಭದ್ರತಾ ಸ್ಥಾವರಗಳ ಮೇಲೆ ದಾಳಿ ಹಾಗೂ ನಾಗರಿಕ ದೌರ್ಜನ್ಯ ಸೇರಿದಂತೆ ಹಲವು ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News