ಹೈಕೋರ್ಟ್ ಆದೇಶ: ಈ ರಾಜ್ಯದ ಎಲ್ಲ ಪ್ರಾಣಿಗಳಿಗೂ ಕಾನೂನುಬದ್ಧ ವ್ಯಕ್ತಿಯ ಸ್ಥಾನಮಾನ!

Update: 2019-06-02 08:44 GMT

ಚಂಡೀಗಢ, ಜೂ.2: ಹರ್ಯಾಣದಲ್ಲಿರುವ ಎಲ್ಲ ಪ್ರಾಣಿಗಳಿಗೂ ಕಾನೂನುಬದ್ಧ ವ್ಯಕ್ತಿಯ ಸ್ಥಾನಮಾನ ನೀಡುವ ಮಹತ್ವದ ತೀರ್ಪನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪ್ರಕಟಿಸಿದೆ. ಇದಕ್ಕೆ ಅನುಗುಣವಾಗಿ ಜನಸಾಮಾನ್ಯರಿಗೆ ಇರುವ ಎಲ್ಲ ಹಕ್ಕುಗಳು, ಕರ್ತವ್ಯಗಳು ಮತ್ತು ಹೊಣೆಗಾರಿಕೆಯನ್ನು ಕೂಡಾ ನ್ಯಾಯಾಲಯ ಮಂಜೂರು ಮಾಡಿದೆ.

‘ಪ್ರಾಣಿ ಕಲ್ಯಾಣವನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಕ್ರಮ ಕೈಗೊಳ್ಳಬೇಕು’ ಎಂದು ಕಳೆದ ವರ್ಷ ಉತ್ತರಾಖಂಡ ಹೈಕೋರ್ಟ್ ನೀಡಿದ್ದಕ್ಕೆ ಸನಿಹವಾದ ತೀರ್ಪನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕೂಡಾ ನೀಡಿದೆ.

ಎರಡೂ ಆದೇಶಗಳನ್ನು ನ್ಯಾಯಮೂರ್ತಿ ರಾಜೀವ್ ಶರ್ಮಾ ನೀಡಿದ್ದು, ಇವರು ಕಳೆದ ವರ್ಷ ಉತ್ತರಾಖಂಡದಿಂದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‍ಗೆ ವರ್ಗಾವಣೆಯಾಗಿದ್ದರು. ಗಂಗಾನದಿ ಹಾಗೂ ಯಮುನಾನದಿಯನ್ನು ಕೂಡಾ ಸಜೀವ ನದಿಗಳು ಎಂದು 2017ರಲ್ಲಿ ತೀರ್ಪು ನೀಡಿದ್ದ ಉತ್ತರಾಖಂಡ ಹೈಕೋರ್ಟ್ ನ್ಯಾಯಪೀಠದಲ್ಲೂ ಇವರು ಇದ್ದರು. ಈ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News