ಈದುಲ್ ಫಿತ್ರ್‌ಗೆ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹ
Update: 2019-06-02 18:16 IST
ಮಂಗಳೂರು, ಜೂ.2: ದ.ಕ.ಜಿಲ್ಲಾದ್ಯಂತ ಉದ್ಭವಿಸಿದ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ರೂಪಿಸಲಾದ ರೇಶನಿಂಗ್ ವ್ಯವಸ್ಥೆಯನ್ನು ಈದುಲ್ ಫಿತ್ರ್ ಪ್ರಯುಕ್ತ ಮಾರ್ಪಾಟು ಮಾಡಬೇಕು ಎಂದು ಮಂಗಳೂರು ಮುಸ್ಲಿಂ ಕಮಿಟಿ ಒತ್ತಾಯಿಸಿದೆ.
ಕಮಿಟಿಯ ಅಧ್ಯಕ್ಷ ಅಲಿ ಹಸನ್ ಹೇಳಿಕೆಯೊಂದನ್ನು ನೀಡಿ ಜೂ.4 ಅಥವಾ 5ರಂದು ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ಆಚರಿಸಲಿದ್ದಾರೆ. ಅಂದು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆಯಾಗುವ ಕಾರಣ ಜಿಲ್ಲಾಡಳಿತವು ಸಕಾಲಕ್ಕೆ ನೀರು ಪೂರೈಕೆ ಮಾಡಿ ಮುಸ್ಲಿಮರು ಅತ್ಯಂತ ಸಂಭ್ರಮದಿಂದ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.