ರಮಝಾನ್ ಆಚರಣೆ:ಪಡುಬಿದ್ರೆ ಯಲ್ಲಿ ಶಾಂತಿ ಸಭೆ
Update: 2019-06-02 20:50 IST
ಪಡುಬಿದ್ರಿ: ಪವಿತ್ರ ರಮಝಾನ್ ಹಬ್ಬ ಆಚರಣೆ ವೇಳೆ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸರ್ವಧರ್ಮಯರು ಸಹಕರಿಸುವಂತೆ ಪಡುಬಿದ್ರಿ ಠಾಣಾ ನೂತನ ಪಿಎಸ್‍ಐ ಸುಬ್ಬಣ್ಣ ಬಿ ಹೇಳಿದರು.
ರವಿವಾರ ನಡೆದ ಸರ್ವಧರ್ಮ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕೋಮು ಸೌಹಾರ್ದತೆ ಕಾಪಾಡಿಕೊಂಡು ಹಬ್ಬ ಆಚರಿಸುವಂತೆ ಹಾಗೂ ಇನ್ನಿತರ ಸಮಾಜದ ಭಾವನೆ ಗಳಿಗೆ ಧಕ್ಕೆಯಾಗದಂತೆ ಶಾಂತಿಯುತ ಹಬ್ಬವನ್ನು ಆಚರಿಸಬೇಕು ಅದಕ್ಕೆ ಸರ್ವಧರ್ಮಿಯರ ಸಹಕಾರ ಕೂಡ ಅತ್ಯಗತ್ಯ ಎಂದರು.
ಪಡುಬಿದ್ರಿ ಠಾಣೆಯ ಪ್ರೊಬಷನರಿ ಪಿಎಸ್‍ಐ ಉದಯ್ ರವಿ ಮಾತನಾಡಿದರು. ಸಭೆಯಲ್ಲಿ ಊರಿನ ಗಣ್ಯರಾದ ಶಬ್ಬೀರ್ ಸಾಹೇಬ್, ಸೂಪಿ ಹೆಜಮಾಡಿ, ನವೀನ್ ಚಂದ್ರ ಜೆ ಸುವರ್ಣ, ಲೋಕೇಶ್ ಅಂಚನ್, ಹಸನ್ ಬಾವ ಕಂಚಿನಡ್ಕ, ಸನಾ ಇಬ್ರಾಹಿಂ, ಸಿರಾಜ್ ಎನ್.ಎಚ್ ಉಚ್ಚಿಲ, ಮುಝಪ್ಪರ್ ಉಚ್ಚಿಲ, ಇಬಾದುಲ್ಲಾ ಉಚ್ಚಿಲ, ಹರೀಶ್ ಕಂಚಿನಡ್ಕ, ಪೊಲೀಸ್ ಸಿಬ್ಬಂದಿಗಳಾದ ಯೋಗೀಶ್,ಮಣಿಯಾಣಿ ಹಾಗು ಅಪ್ಪು ಉಪಸ್ಥಿತರಿದ್ದರು.