×
Ad

ರಸ್ತೆಯ ತಡೆಬೇಲಿಗೆ ಬೈಕ್ ಢಿಕ್ಕಿ: ಸವಾರ ಸಾವು

Update: 2019-06-02 20:56 IST

ಪಡುಬಿದ್ರಿ: ಬೈಕೊಂದು ರಸ್ತೆ ಬದಿಯಲ್ಲಿ ಅಳವಡಿಸಿರುವ ಕಬ್ಬಿಣದ ತಡೆಬೇಲಿಗೆ ಢಿಕ್ಕಿ ಹೊಡೆದು ಸವಾರನೊರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ  ಸಾಂತೂರಿನಲ್ಲಿ ನಡೆದಿದೆ.

ಮೃತನನ್ನು ಬೈಕ್ ಸವಾರ ದೀಪು ಸಿಂಗ್ (20) ಎಂದು ಗುರುತಿಸಲಾಗಿದೆ. ಸಹಸವಾರ ಅಮರ್‍ಜಿತ್ ಸಿಂಗ್ (20) ಗಂಭೀರ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಿಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದು, ಸಾಂತೂರಿನ ಎಂಜಿ ಕೃಷರ್ ಸಂಸ್ಥೆಯಲ್ಲಿ ಕೆಲಸ ಮಾಡುತಿದ್ದರು.

ಇಂದು ಮಧ್ಯಾಹ್ನ ಸಾಂತೂರಿನಿಂದ ಪಡುಬಿದ್ರಿ ಕಡೆಗೆ ಸಂಚರಿಸುತಿದ್ದಾಗ ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಅಳವಡಿಸಿದ ಕಬ್ಬಿಣದ ತಡೆಬೇಲಿಗೆ ಢಿಕ್ಕಿ ಹೊಡೆಯಿತು. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News