×
Ad

​ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಲಾರಿ ಕಳವು

Update: 2019-06-02 21:37 IST

ಬೈಂದೂರು, ಜೂ. 2: ಗ್ಯಾರೇಜಿನಲ್ಲಿ ರಿಪೇರಿಗಾಗಿ ನಿಲ್ಲಿಸಲಾದ ಲಾರಿಯನ್ನು ಕಳವು ಮಾಡಿರುವ ಘಟನೆ ಮೇ 31ರಂದು ರಾತ್ರಿ ವೇಳೆ ಶಿರೂರು ಗ್ರಾಮದ ನೀರ್ಗದ್ದೆ ಎಂಬಲ್ಲಿ ನಡೆದಿದೆ.

ಬೈಂದೂರು ಕೆರೆಜೆಡ್ಡುವಿನ ನರಸಿಂಹ ದೇವಾಡಿಗ ಎಂಬವರು ತನ್ನ ಮೂಕಾಂಬಿಕಾ ರೋಡ್‌ಲೈನ್ಸ್ ಎಂಬ ಹೆಸರಿನ ಕೆಎ-20-ಬಿ-8829 ನೇ ನಂಬರಿನ ಲಾರಿಯನ್ನು ರಿಪೇರಿಗಾಗಿ ನೀರ್ಗದ್ದೆ ಗಣೇಶ್ ಎಂಬವರ ಜಟ್ಟಿಗೇಶ್ವರ ಬಾಡಿ ಬಿಲ್ಡರ್ಸ್‌ ಎಂಬ ಗ್ಯಾರೇಜಿನಲ್ಲಿ ನಿಲ್ಲಿಸಿದ್ದರು.

ಗ್ಯಾರೇಜ್‌ನವರು ಈ ಲಾರಿಯ ಬಾಡಿಯನ್ನು ಕಳಚಿ ದುರಸ್ಥಿ ಕಾರ್ಯ ನಡೆಸುತ್ತಿದ್ದರು. ರಾತ್ರಿ ವೇಳೆ ಗ್ಯಾರೇಜಿನಲ್ಲಿ ನಿಲ್ಲಿದ್ದ ಲಾರಿಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಲಾರಿ ಮೌಲ್ಯ 5,25,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News