ವಿಶ್ವಕಪ್: ಇಂಗ್ಲೆಂಡ್‌ಗೆ 349 ರನ್ ಗುರಿ ನೀಡಿದ ಪಾಕ್

Update: 2019-06-03 13:52 GMT

ಟ್ರೆಂಟ್‌ಬ್ರಿಡ್ಜ್, ಜೂ.2: ಹಿರಿಯ ದಾಂಡಿಗ ಮುಹಮ್ಮದ್ ಹಫೀಝ್(84), ಬಾಬರ್ ಆಝಂ(63) ಹಾಗೂ ಸರ್ಫರಾಝ್ ಅಹ್ಮದ್(55)ಗಳಿಸಿದ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಕ್ರಿಕೆಟ್‌ನ ಆರನೇ ಪಂದ್ಯದ ಗೆಲುವಿಗೆ 349 ರನ್ ಗುರಿ ನೀಡಿದೆ.

ಸೋಮವಾರ ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 348 ರನ್ ಕಲೆ ಹಾಕಿದೆ.

ಪಾಕ್ ಪರ ಇನಿಂಗ್ಸ್ ಆರಂಭಿಸಿದ ಇಮಾಮ್‌ವುಲ್ ಹಕ್(44) ಹಾಗೂ ಫಾಕರ್ ಝಮಾನ್(36) ಮೊದಲ ವಿಕೆಟ್‌ಗೆ 82 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. 62 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳ ಸಹಿತ 84 ರನ್ ಗಳಿಸಿ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದ ಹಫೀಝ್ ಅವರು ಬಾಬರ್ ಆಝಂ(63, 66 ಎಸೆತ)ಅವರೊಂದಿಗೆ 3ನೇ ವಿಕೆಟ್‌ಗೆ 88 ರನ್ ಹಾಗೂ ಸರ್ಫರಾಝ್ ಅಹ್ಮದ್(55, 44 ಎಸೆತ)ಅವರೊಂದಿಗೆ 4ನೇ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.

ಇಂಗ್ಲೆಂಡ್‌ನ ಪರ ಮೊಯಿನ್ ಅಲಿ(3-50) ಹಾಗೂ ಕ್ರಿಸ್ ವೋಕ್ಸ್(3-71)ತಲಾ 3 ವಿಕೆಟ್‌ಗಳನ್ನು ಪಡೆದರು. ಮಾರ್ಕ್‌ವುಡ್(2-53)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News