×
Ad

ಮಂಗಳೂರು ವಿ.ವಿ .ಕುಲಪತಿಯಾಗಿ ಪಿ.ಎಸ್.ಎಡಪಡಿತ್ತಾಯ ನೇಮಕ

Update: 2019-06-03 20:22 IST

ಮಂಗಳೂರು, ಜೂ. 3: ಮಂಗಳೂರು ವಿಶ್ವ ವಿದ್ಯಾನಿಲಯದ ನೂತನ ಕುಲಪತಿಯಾಗಿ ಪಿ.ಎಸ್.ಎಡಪಡಿತ್ತಾಯ ನೇಮಕಗೊಂಡಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಹಣಕಾಸು ಅಧಿಕಾರಿ, ಕುಲಸಚಿವರಾಗಿ (ಪರೀಕ್ಷಾಂಗ)ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಡಾ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ವರನ್ನು ರಾಜ್ಯಪಾಲ ಮತ್ತು ಕುಲಾಧಿಪತಿ ವಜುಭಾಯಿವಾಲ ನೇಮಕಗೊಳಿಸಿ ಆದೇಶ ಮಾಡಿದ್ದಾರೆ.

2018ರಲ್ಲಿ ಕುಲಪತಿ ಯಾಗಿದ್ದ ಪ್ರೊ.ಕೆ.ಬೈರಪ್ಪ ಅವಧಿ ಕೊನೆಗೊಂಡ ಬಳಿಕ ಕಿಶೋರ್ ಕುಮಾರ್,ಬಳಿಕ ಪ್ರೊ.ಈಶ್ವರ್ ಹಾಗೂ ಬಳಿಕ ಕಿಶೋರಿ ನಾಯಕ್ ಕುಲಪತಿಯ ಹುದ್ದೆಯನ್ನು ನಿರ್ವಹಿಸಿದ್ದರು.ಇದೀಗ ಪಿ.ಎಸ್.ಎಡಪಡಿತ್ತಾಯ ಮುಂದಿನ ನಾಲ್ಕು ವರ್ಷದ ಅವಧಿಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ಕೊಕ್ಕಡದ ನಾರಾಯಣ ಎಡಪಡಿತ್ತಾಯ ಮತ್ತು ಭವಾಣಿ ಆಚಾರ್ಯರವರ ಪುತ್ರ ಪಿ.ಎಸ್.ಎಡಪಡಿತ್ತಾಯ ಮಂಗಳೂರು ವಿಶ್ವ ವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ 1980-82 ಪ್ರಥಮ ರ್ಯಾಂಕ್‌ನೊಂದಿಗೆ ಚಿನ್ನದ ಪದಕ ಪಡೆದ ಹಳೆ ವಿದ್ಯಾರ್ಥಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಆಯ್ಕೆಯಾಗಿದ್ದಾರೆ.

1992ರಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. 1982ರಲ್ಲಿ ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಆರು ತಿಂಗಳು ತಾತ್ಕಲಿಕ ನೆಲೆಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ಬಳಿಕ 1982ರಿಂದ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕರಾಗಿ ಸುಮಾರು 32 ವರ್ಷಗಳ ಕಾಲ ಬೋಧನೆ, ಸಂಶೋಧನೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪಿ.ಎಸ್.ಎರಡಪಡಿತ್ತಾಯ ಇದೀಗ ಕುಲಪತಿ ಹುದ್ದೆಗೆ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News