ಮಿಲ್ಲತ್ ಕ್ರೆಡಿಟ್‌ನಿಂದ ರಮಝಾನ್ ಕಿಟ್ ವಿತರಣೆ
Update: 2019-06-03 20:31 IST
ಮಂಗಳೂರು, ಜೂ.3: ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಕಚೇರಿಯಲ್ಲಿ ನಡೆಯಿತು.
ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಸೊಸೈಟಿ ನಿರ್ದೇಶಕ ನಿಸಾರ್ ಫಕೀರ್ ಮುಹಮ್ಮದ್, ಅಬ್ದುಲ್ ರಝಾಕ್, ಅಬ್ದುಲ್ಲಾ ಬಿನ್ ಅಮೀನ್, ರತ್ನಾಕರ ರಾವ್ ಸಮ್ಮುಖದಲ್ಲಿ ಸಮುದಾಯದ ಸುಮಾರು 125 ಮಂದಿಗೆ ಕಿಟ್ ವಿತರಿಸಲಾಯಿತು.