ಹೇರಿಕೆರೆ: ಕೃಷಿ ಕೂಲಿಕಾರರ ಸಂಘದ ನಿಯೋಗ ಭೇಟಿ
ಕುಂದಾಪುರ, ಜೂ.3: ಕಂದಾವರ ಗ್ರಾಪಂ ವ್ಯಾಪ್ತಿಯ ಹೇರಿಕೆರೆ ಎಂಬಲ್ಲಿ ರುವ ವಿಶಾಲವಾದ ಮದಗವನ್ನು ಹೂಳೆತ್ತುವಂತೆ ಒತ್ತಾಯಿಸಿ ಹೋರಾಟ ರೂಪಿಸುವ ಕುರಿತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದ ನಿಯೋಗವು ಇಂದು ಹೇರಿಕೆರೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ರೃತರೊಡನೆ ವಿಚಾರ ವಿನಿಮಯ ನಡೆಸಿತು.
ಬೇಸಿಗೆಯ ಬರಗಾಲದಿಂದಾಗಿ ಕೆರೆ ನೀರು ಸಂಪೂರ್ಣ ಒಣಗಿ ಬರಡಾ ಗಿದ್ದು, ಈ ಕೆರೆಯನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಮಾಡಬೇಕು ಮತ್ತು ಆ ಮೂಲಕ ಕೃಷಿ ಕೂಲಿಕಾರರಿಗೆ ಕೈಗೊಂದು ಕೆಲಸ ಊರಿಗೊಂದು ಆಸ್ತಿ ಒದಗಿಸಬೇಕು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ನರೇಗ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತವನ್ನು ಒತ್ತಾಯಿ ಸಲಾಗುವುದು ಎಂದು ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಯು.ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕಾರ್ಮಿಕ ಮುಖಂಡ ರಾದ ಸುರೇಶ ಕಲ್ಲಾಗರ್, ಮಹಾಬಲ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.