ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ
Update: 2019-06-03 21:25 IST
ಬೈಂದೂರು, ಜೂ.3: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಬೈಂದೂರು ಪೊಲೀಸರು ಅರೆಮನೆ ಹಕ್ಲು ಎಂಬಲ್ಲಿ ಜೂ.2ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೋರ್ವ ದಾಳಿ ವೇಳೆ ಪರಾರಿಯಾಗಿ ದ್ದಾರೆ. ಲಾರಿಯ ಸಹಿತ 36ಸಾವಿರ ರೂ. ವೌಲ್ಯದ 6 ಯುನಿಟ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.