ಸಾಲದ ಹಣಕ್ಕಾಗಿ ಕೊಲೆಯತ್ನ: ಆರೋಪ ಸಾಬೀತು
ಕುಂದಾಪುರ, ಜೂ.3: ಸಾಲದ ಹಣದ ವಿಚಾರದಲ್ಲಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ದೋಷಿ ಎಂಬು ದಾಗಿ ಇಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಜೂ.11ರಂದು ಪ್ರಕಟಿಸುವುದಾಗಿ ತಿಳಿಸಿದೆ.
2016ರ ಜು.10ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರ್ಗೋಳಿ ಜಲ್ಲಿ ಕ್ರಷರ್ ಲೇಬರ್ ರೂಂನಲ್ಲಿ ಕಾರ್ಮಿಕ ರಾಜಕುಮಾರ್ ಹಾಗೂ ಗದಗದ ಯಲ್ಲಪ್ಪನಡುವೆ ಹಣಕಾಸು ವಿಚಾರದಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಯಲ್ಲಪ್ಪಕತ್ತಿಯಿಂದ ರಾಜಕುಮಾರ್ ಅವರ ಕುತ್ತಿಗೆಗೆ ಮಾರಣಾಂತಿಕ ಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದನು.
ಈ ಬಗ್ಗೆ ಅಂದಿನ ಶಂಕರನಾರಾಯಣ ಎಸ್ಸೈ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಯನ್ನು ದೋಷಿ ಎಂಬುದಾಗಿ ಘೋಷಿಸಿದೆ. ಅಭಿಯೋಜನೆ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.