ಉಡುಪಿ: ನಿವೃತ್ತರಿಗೆ ಬೀಳ್ಕೊಡುಗೆ
Update: 2019-06-03 21:39 IST
ಉಡುಪಿ, ಜೂ.3:ಉಡುಪಿ ಜಿಪಂನಲ್ಲಿ ಲೆಕ್ಕ ಅಧೀಕ್ಷಕರಾಗಿದ್ದ ಇಲಾಖೆಯಲ್ಲಿ 35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಅಶೋಕ್ ಎಸ್ ಹೆಬ್ಬಾರ್ ಇವರನ್ನು ಜಿಪಂ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಉಡುಪಿ ಜಿಪಂ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂದಲ್ಲಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಪಂ ಸಿಇಓ ಸಿಂಧೂ ಬಿ ರೂಪೇಶ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪ ನಿರ್ದೇಶಕ ಪ್ರಸನ್ನ ಭಕ್ತ ಹಾಜರಿದ್ದು, ಶ್ರೀಯುತರ ನಿವೃತ್ತಿ ಜೀವನ ಸುಖಮಯ ವಾಗಿರಲಿ ಎಂದು ಹಾರೈಸಿದರು.
ಅನ್ನಪೂರ್ಣ ಹೆಬ್ಬಾರ್ ಉಪಸ್ಥಿತರಿದ್ದರು.