ಕಲಾವಿದೆ ಶೋಭಾ ರೈಗೆ ಗೌರವ ಡಾಕ್ಟರೇಟ್ ಪ್ರದಾನ
Update: 2019-06-03 21:40 IST
ಮಂಗಳೂರು, ಜೂ.3:ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಟಿ ಶೋಭಾ ರೈ ಅವರಿಗೆ ಚೆನ್ನೈಯ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯುನಿರ್ಸಿಟಿಯು ಗೌರವ ಡಾಕ್ಟರೇಟ್ ನೀಡಿದೆ. ಹೊಸೂರುನಲ್ಲಿರುವ ಸಂಪೂರ್ಣ ಕಾನ್ಪರೆನ್ಸ್ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಡಾ.ಕೆ.ಅಶೋಕ್ ಕುಮಾರ್ ಶೀಬಾ ಗ್ರೇಸ್‌ಮತ್ತು ಡಾ.ಎನ್. ಮರ್ಕಾನಂದನ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಈ ಸಂದರ್ಭ ಡಾ. ರಮಾಲಕ್ಷ್ಮಿ ಚೆಲ್ಲಪ್ಪ, ಡಾ.ಸಿ. ಪೌಲ್ ಎಂಬಾನೆಜರ್, ತಿರು ಎನ್. ಜೀವನಂಥಮ್, ಬಿ.ಎಸ್ ಕಣ್ಣನ್, ಆರ್.ಬಾಲಾಜಿ, ಎಂ.ಇಂದ್ರಕುಮಾರ್, ಪಿ ಕವಿತಾ ಉಪಸ್ಥಿತರಿದ್ದರು.