×
Ad

ಹಿದಾಯತ್‌ನಗರ ಎಸೆಸ್ಸೆಫ್ ವತಿಯಿಂದ ಪುಸ್ತಕ ವಿತರಣೆ

Update: 2019-06-03 21:43 IST

ಉಳ್ಳಾಲ, ಜೂ. 3: ಜೀವನದಲ್ಲಿ ಶಿಕ್ಷಣ ಪಡೆದಾಗ ಶಿಸ್ತಿನೊಂದಿಗೆ ಇಸ್ಲಾಮ್ ತಿಳಿಸಿದ ರೀತಿಯಲ್ಲಿ ಜೀವನ ನಡೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾದಾನ ಶ್ರೇಷ್ಠವಾಗಿದೆ ಎಂದು ಹಿದಾಯತ್ ನಗರ ಜುಮಾ ಮಸೀದಿಯ ಅಧ್ಯಕ್ಷ ಉಮರ್ ಮಾಸ್ಟರ್ ಅಭಿಪ್ರಾಯಪಟ್ಟರು.

ಹಿದಾಯತ್ ನಗರ ಎಸೆಸ್ಸೆಫ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಮಕ್ಕಳೂ ಜೀವನದಲ್ಲಿ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಅತಿಮುಖ್ಯ. ವಿದ್ಯೆಗೆ ನೀಡುವ ದಾನ ಶಾಶ್ವತವಾಗಿರುತ್ತದೆ. ಇಂತಹ ಸೇವೆ ನಿರಂತರ ಮುಂದುವರೆಯಬೇಕು ಎಂದು ಉಮರಬ್ಬ ಮಾಸ್ಟರ್ ಆಶಿಸಿದರು.

ಹಿದಾಯತ್ ನಗರ ಎಸೆಸ್ಸೆಫ್ ಹಿದಾಯತ್ ಅಧ್ಯಕ್ಷ ಶಬೀರ್ ಅಶ್‌ಅರಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಹ್ಮದ್ ಕಬೀರ್ ಸಅದಿ ಉಳ್ಳಾಲ ದುಆ ಮಾಡಿದರು. ಮದ್ರಸದ ಮುಅಲ್ಲಿಂ ಅಶ್ರಫ್ ಅಮ್ಜದಿ, ಉಪಾಧ್ಯಕ್ಷ ಝುಬೈರ್ ಝುಹ್ರಿ, ಮಸೀದಿಯ ಕಾರ್ಯದರ್ಶಿ ಎಸ್.ಝಾಕಿರ್, ಕೋಶಾಧಿಕಾರಿ ಸುಲೈಮಾನ್ ಭಾಗವಹಿಸಿದ್ದರು.

ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಲಿಬಾನ್ ಮರ್ಝಾಕಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News