×
Ad

‘ಗೋಕುಲ ನಿರ್ಗಮನ’ ನೃತ್ಯರೂಪಕ ಪ್ರದರ್ಶನ

Update: 2019-06-03 21:49 IST

ಮಂಗಳೂರು, ಜೂ.2: ಅರೆಹೊಳೆ ಪ್ರತಿಷ್ಠಾನದ ಕಲಾತಂಡವಾದ ನಂದಗೋಕುಲ ವತಿಯಿಂದ ನಗರದ ಡಾನ್ ಬಾಸ್ಕೋ ಸಭಾಭವನದಲ್ಲಿ ‘ಗೋಕುಲ ನಿರ್ಗಮನ’ ಕನ್ನಡ ನೃತ್ಯರೂಪಕ ಪ್ರದರ್ಶನಗೊಂಡಿತು.

ಗೋಕುಲ ನಿರ್ಗಮನದ ನಿರ್ದೇಶಕಿ ಶ್ವೇತಾ ಅರೆಹೊಳೆ ಅವರಿಗೆ ಕೃಷ್ಣನ ಕೊಳಲು ಹಾಗೂ ಶಿರೋಧಾರೆಯನ್ನು ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಯಕ್ಷನಾಟ್ಯ ವಿನಾಯಕ ದೇವಸ್ಥಾನ ಕಲ್ಲಗದ್ದೆ ಸಿದ್ದಾಪುರ ಸ್ಥಾಪಕ ವಿನಾಯಕ ಹೆಗಡೆ ಹಸ್ತಾಂತರಿಸುವ ಮೂಲಕ ಪ್ರದರ್ಶನವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿನಾಯಕ ಹೆಗಡೆ, ಸಂಘಟನೆ ಎನ್ನುವುದು ಸುಲಭವಾದುದಲ್ಲ. ಆರ್ಥಿಕವಾದ ಹೊಣೆಯು ಸಂಘಟನೆಯಾಗಿದೆ. ಆ ನಿಟ್ಟಿನಲ್ಲಿ ಧೃತಿಗೆಡದೆ ಅರೆಹೊಳೆ ಪ್ರತಿಷ್ಠಾನ ಬೆಳೆಯುತ್ತಿದೆ. ಭಾರತೀಯರ ಹೆಮ್ಮೆ ಸಾಹಿತ್ಯ, ಸಂಸ್ಕೃತಿ, ಕಲೆಯಿಂದ ಉಳಿದಿದೆ. ಈ ಸಂಸ್ಕೃತಿ ಕಲಾಪ್ರಕಾರದಿಂದ ಬರುತ್ತದೆ ಎಂದು ಹೇಳಿದರು.

ಕನ್ನಡದ ಕವಿ ಪುತಿನ ಅವರು ರಚಿಸಿದ ನೃತ್ಯ ನಾಟಕದ ನೃತ್ಯ ರೂಪಕವನ್ನು ಶ್ವೇತಾ ಅರೆಹೊಳೆ ನಿರ್ದೇಶಿಸಿದ್ದಾರೆ. ಶೋಧನ್ ಎರ್ಮಾಲ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಗೀತಾ ಅರೆಹೊಳೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ವಸುಂಧರಾ ಹರೀಶ್, ಆನಂದಾಶ್ರಮದ ಮುಖ್ಯಸ್ಥೆ ಹಾಗೂ ಸಮಾಜಸೇವಕಿ ಡಾ.ಗೌರಿಪ್ರಿಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅರೆಹೊಳೆ ಸದಾಶಿವ ರಾವ್, ಕೆ.ಸಿ. ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News