×
Ad

ಈದ್ ದಿನ ನೀರು ಸರಬರಾಜಿಗೆ ಮನವಿ: ವೆಲ್ಫೇರ್ ಪಾರ್ಟಿ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ

Update: 2019-06-03 22:37 IST

ಮಂಗಳೂರು, ಜೂ.3: ಇದೇ ‘ಜೂ.4-5ರಂದು ಈದ್ ಹಬ್ಬ ಆಚರಿಸಲಿದ್ದು, ಇದು ನೀರಿನ ಅಗತ್ಯವಿದ್ದು, ನೀರನ್ನು ಸರಬರಾಜು ಮಾಡಲು ವೆಲ್ಫೇರ್ ಪಾರ್ಟಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಇದಕ್ಕೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ವೆಲ್ಫೇರ್ ಪಾರ್ಟಿ ತಿಳಿಸಿದೆ.

ಜಿಲ್ಲಾಡಳಿತವು ಮೂರು ದಿನ ಅಥವಾ ಕನಿಷ್ಠ ಎರಡು ದಿನಗಳಲ್ಲಿ ನೀರನ್ನು ಸರಬರಾಜು ಮಾಡಲು ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಬೇಕು ಎಂದು ವೆಲ್ಫೇರ್ ದ.ಕ. ಘಟಕ ಮನವಿಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಮುತ್ತಲಿಬ್, ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಸರ್ಫರಾಝ್ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News