×
Ad

ಅಂತರ್ ರಾಜ್ಯ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್‍ಗೆ ಪ್ರಶಸ್ತಿ

Update: 2019-06-03 22:39 IST

ಮೂಡುಬಿದಿರೆ: ಬಳ್ಳಾರಿ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ ಕರ್ನಾಟಕ - ಆಂದ್ರಪ್ರದೇಶ ರಾಜ್ಯಗಳ ಅಂತರ್ ರಾಜ್ಯ ಅಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.

2 ರಾಜ್ಯಗಳ 18 ಅಹ್ವಾನಿತ ತಂಡಗಳು ಭಾಗವಹಿಸಿದ್ದ ಈ  ಟೂರ್ನಿಯ ಪೈನಲ್ಸ್‍ನಲ್ಲಿ ಆಳ್ವಾಸ್ ತಂಡ ಬಳ್ಳಾರಿಯ ಶ್ರವಣ ಫೈವ್ಸ್ ತಂಡವನ್ನು ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿತು.

ಸೆಮಿಪೈನಲ್ಸ್ ಪಂದ್ಯಗಳಲ್ಲಿ ಆಳ್ವಾಸ್ ತಂಡ ಆಂದ್ರಪ್ರದೇಶದ ಅನಂತಪುರ ತಂಡವನ್ನು ಹಾಗೂ ಶ್ರವಣ ಫೈವ್ಸ್ ತಂಡವು ಹಾಸನ ಫ್ರೆಂಡ್ಸ್ ತಂಡವನ್ನು ಸೋಲಿಸಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ಆಳ್ವಾಸ್ ತಂಡದ ಕಿರಣ್ ಕುಮಾರ್ ಕೂಟದ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News