×
Ad

ಆಳ್ವಾಸ್‍ನ ಸಾಧಕ ವಿದ್ಯಾರ್ಥಿಗಳಿಗೆ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ

Update: 2019-06-03 22:40 IST

ಮೂಡುಬಿದಿರೆ: ನಾಗಲ್ಯಾಂಡ್ ರಾಜ್ಯಪಾಲ ಡಾ.ಪಿ.ಬಿ ಆಚಾರ್ಯ ಅವರ ಪ್ರಾಯೋಜಕತ್ವದ ಡಾ.ಪಿ.ಬಿ ಆಚಾರ್ಯ ಪ್ರಶಸ್ತಿ 2019 ಅನ್ನು ಆಳ್ವಾಸ್ ಸಂಸ್ಥೆಯ ಶೈಕ್ಷಣಿಕ ಸಾಧಕ ಐದು ಮಂದಿ ವಿದ್ಯಾರ್ಥಿಗಳಿಗೆ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಪ್ರಧಾನ ಮಾಡಿದರು.

ರಾಜೀವ್‍ಗಾಂಧಿ ವಿಶ್ವವಿದ್ಯಾಲಯದ ಸುವರ್ಣಪದಕ ವಿಜೇತ ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಡಾ.ವಿಷ್ಣು ಆರ್., ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿನಿ ಗ್ರೇಸ್ ತೊಕ್ಕೋಮ್, ಆಳ್ವಾಸ್ ಬಿಎನ್‍ವೈಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಬೇಬಿ ಚಂದ್ ಓಯಿನಮ್, ಆಳ್ವಾಸ್ ಬಿಎನ್‍ವೈಎಸ್ ಮೂರನೇ ವರ್ಷದ ವಿದ್ಯಾರ್ಥಿನಿ ಈವಕಾ ಸಿಂಗ್ಶಾಯಿ, ಬಿಎನ್‍ವೈಎಸ್ ದ್ವಿತೀಯ ವರ್ಷದ ವಿದ್ಯಾರ್ಥಿನಿ ಇಲಂಗ್ಬಂ ಮನಿಶಾ ದೇವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News