ಮಂಗಳೂರು ನಗರಕ್ಕೆ ನೀರು: ಜಿಲ್ಲಾಡಳಿತದ ಜೊತೆಗೆ ಯು.ಟಿ.ಖಾದರ್ ಚರ್ಚೆ
Update: 2019-06-03 23:04 IST
ಮಂಗಳೂರು: ನಗರದಲ್ಲಿ ನೀರಿನ ಸಮಸ್ಯೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಸೋಮವಾರ ಸಮಾಲೋಚನೆ ನಡೆಸಿದರು.
ಪ್ರಸ್ತುತ ಕುದುರೆಮುಖ ಭಾಗದಲ್ಲಿ ಮಳೆಯಾಗಿರುವುದರಿಂದ ಕರಾವಳಿ ಪ್ರದೇಶದಲ್ಲಿ ನೀರಿನ ಒರತೆಯಾಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ. ಹೀಗಾದಲ್ಲಿ ನೀರಿಗೆ ಸಮಸ್ಯೆಬಾರದು. ಸಧ್ಯ ಇರುವ ನೀರಿನಲ್ಲಿ ಜೂನ್ 8 ರ ತನಕ ಸಮಸ್ಯೆ ಇಲ್ಲ. ಈದ್ ಹಾಗೂ ಮತ್ತಿತರ ಹಬ್ಬದ ಸಂದರ್ಭ ಸಾರ್ವಜನಿಕರಿಗೆ ನೀರಿನ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.