ಕೆಲವು 737 ಮಾದರಿಗಳ ರೆಕ್ಕೆಗಳಲ್ಲಿ ದೋಷ: ಬೋಯಿಂಗ್

Update: 2019-06-03 18:21 GMT

ವಾಶಿಂಗ್ಟನ್, ಜೂ. 3: 737 ಮ್ಯಾಕ್ಸ್ 8 ಸೇರಿದಂತೆ, ತನ್ನ ಮಧ್ಯಮ ಗಾತ್ರದ ಕೆಲವು 737 ಮಾದರಿಗಳ ವಿಮಾನಗಳು ದೋಷಪೂರಿತ ರೆಕ್ಕೆಗಳನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್ ರವಿವಾರ ಹೇಳಿದೆ. ಆದಾಗ್ಯೂ, ಈ ದೋಷಕ್ಕೆ ಸಂಬಂಧಿಸಿ ಹಾರಾಟದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂಬುದಾಗಿಯೂ ಅದು ಹೇಳಿದೆ.

ರೆಕ್ಕೆಯ ತುದಿ (ಲೀಡಿಂಗ್ ಎಜ್)ಯನ್ನು ಕಾರ್ಯಪ್ರವೃತ್ತಗೊಳಿಸುವ ಭಾಗವೊಂದರ ಒಂದು ಬ್ಯಾಚ್‌ನಲ್ಲಿ ಸಮಸ್ಯೆಗಳಿರುವುದನ್ನು ಉಪಗುತ್ತಿಗೆದಾರರೊಬ್ಬರು ತನ್ನ ಗಮನಕ್ಕೆ ತಂದಿದ್ದಾರೆ ಎಂದು ಬೋಯಿಂಗ್ ಹೇಳಿದೆ.

ಕಳೆದ ವರ್ಷದ ಅಕ್ಟೋಬರ್ ಮತ್ತು ಈ ವರ್ಷದ ಮಾರ್ಚ್‌ನಲ್ಲಿ 737-ಮ್ಯಾಕ್ಸ್ 8 ಮಾದರಿಯ ಎರಡು ವಿಮಾನಗಳು ಕ್ರಮವಾಗಿ ಇಂಡೋನೇಶ್ಯ ಮತ್ತು ಇಥಿಯೋಪಿಯಗಳಲ್ಲಿ ಪತನಗೊಂಡ ಬಳಿಕ, ಜಗತ್ತಿನಾದ್ಯಂತ ಈ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿರುವುದನ್ನು ಸ್ಮರಿಸಬಹುದಾಗಿದೆ. ಅಂದಿನಿಂದ ಬೋಯಿಂಗ್ ಕಂಪೆನಿಯು ಬಿಕ್ಕಟ್ಟನ್ನು ಎದುರಿಸುತ್ತಿದೆ.

ವಿಮಾನವೊಂದರ ‘ಲೀಡಿಂಗ್ ಎಜ್’ ಹಾರಾಟ ಆರಂಭ (ಟೇಕಾಫ್) ಮತ್ತು ಭೂಸ್ಪರ್ಶಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News