17 ಸಾವಿರ ರೂ. ಬೆಲೆಯ ವಿಶ್ವಕಪ್ ಟಿಕೆಟ್ 1.5 ಲಕ್ಷ ರೂ.ಗೆ ಮಾರಾಟ!

Update: 2019-06-04 03:47 GMT

ಮುಂಬೈ, ಜೂ.3: ಇಂಗ್ಲೆಂಡ್‌ನಲ್ಲಿ ಈಗ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯ ಜು.14 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಬೆಳ್ಳಿ ಹಾಗೂ ಕಂಚಿನ ವಿಭಾಗದ ಟಿಕೆಟ್‌ಗಳ ಬೆಲೆ ಕ್ರಮವಾಗಿ 195 ಪೌಂಡ್(17,150 ರೂ.) ಹಾಗೂ 95 ಪೌಂಡ್(8,355 ರೂ.)ಇದೆ. ಆದರೆ, ಇದನ್ನು 1700 ಪೌಂಡ್(1.5 ಲಕ್ಷ ರೂ.) ಹಾಗೂ 1500 ಪೌಂಡ್‌ಗೆ(1.31 ಲಕ್ಷ ರೂ.)ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಜೂ.30 ರಂದು ನಡೆಯುವ ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯುವ ಪಂದ್ಯದ ‘ಪ್ಲಾಟಿನಂ ಟಿಕೆಟ್‌‘ ಬೆಲೆಯನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಿಗದಿಪಡಿಸಿದ್ದು, ಐಸಿಸಿಯ ಅಧಿಕೃತ ಟಿಕೆಟ್ ಪಾರ್ಟ್ನರ್ ‘ಟಿಕೆಟ್ ಮಾಸ್ಟರ್’20,668 ರೂ.ಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಅದನ್ನೀಗ 995 ಪೌಂಡ್‌ಗೆ(1.31 ಲಕ್ಷ ರೂ.)ಮಾರಾಟ ಮಾಡಲಾಗುತ್ತಿದೆ. ಈ ಎಲ್ಲ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿಲ್ಲ. ಈ ಎಲ್ಲ ಟಿಕೆಟ್‌ಗಳು ಐಸಿಸಿ ಅಧಿಕೃತ ಟ್ರಾವಲ್ ಏಜೆಂಟ್, ಕೋಲ್ಕತಾ ಮೂಲದ ಕಂಪೆನಿ ಫನಾಟಿಕ್ ಸ್ಪೋರ್ಟ್ಸ್‌ನಲ್ಲಿ ಲಭ್ಯವಿದೆ. ಟಿಕೆಟ್ ದರ ಪಟ್ಟಿಯಲ್ಲಿ ನೀತಿ-ನಿಯಮಗಳು ಅನ್ವಯವಾಗಲಿದೆ ಎಂದು ಬರೆಯಲಾಗಿದ್ದು, ಎಲ್ಲದ್ದಕ್ಕೂ ಐಸಿಸಿ ಮಾನ್ಯತೆಯಿದೆ ಎಂದು ನಮೂದಿಸಲಾಗಿದೆ. ಆಂಗ್ಲಪತ್ರಿಕೆ ಈ ವಿಷಯದ ಕುರಿತು ಐಸಿಸಿ ಹಾಗೂ ಅದರ ಟಿಕೆಟ್ ಪಾರ್ಟ್ನರ್‌‘ಟಿಕೆಟ್ ಮಾಸ್ಟರ್’ ನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News