ಕಾರ್ಕಳ: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಆಹ್ವಾನ

Update: 2019-06-04 12:49 GMT

ಉಡುಪಿ, ಜೂ.4: ಕೇಂದ್ರ ಸರಕಾರ 2019-20ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ನಗರ) ಹೌಸಿಂಗ್ ಪಾರ್ ಆಲ್ ಯೋಜನೆ ಯನ್ನು ಜಾರಿಗೊಳಿಸಿದೆ.ಈ ಯೋಜನೆ ಉದ್ದೇಶ ಆರ್ಥಿಕ ದುರ್ಬಲ ವಿಭಾಗ, ಕಡಿಮೆ ಆದಾಯ ಗುಂಪು, ಮಧ್ಯಮ ಆದಾಯ-ಐ, ಮಧ್ಯಮ ಆದಾಯ- ಐಐ ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಬ್ಯಾಂಕುಗಳು, ಪೈನಾನ್ಸ್ ಕಂಪೆನಿ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಬಡ್ಡಿ ಸಹಾಯಧನದ ಸೌಲ್ಯ ವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸುವುದಾಗಿದೆ.

ಈ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಕಟ್ಟಡದ ನೀಲಿ ನಕ್ಷೆ, ಆರ್‌ಟಿಸಿ ಪತ್ರ/ ಖಾತಾ, ಕಟ್ಟಡ ಪರವಾನಿಗೆ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು), ಭಾವಚಿತ್ರದ 2 ಸೆಟ್‌ನೊಂದಿಗೆ ಕಾರ್ಕಳ ಪುರಸಬೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾರ್ಕಳ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News